ತುಮಕೂರು: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ.
ಆಹಾರ ಅರಸಿ ಚಿರತೆಯೊಂದು ರಂಗಸ್ವಾಮಿ ಎಂಬವರ ತೋಟಕ್ಕೆ ಬಂದಿದೆ. ಬಳಿಕ ತಂತಿ ಬೇಲಿ ದಾಟಿ ಮುಂದಕ್ಕೆ ಬರುತ್ತಿದ್ದಾಗ ಸಿಲುಕಿಕೊಂಡಿದೆ. ಚಿರತೆಯ ಹೊಟ್ಟೆ ಮತ್ತು ಕತ್ತಿನ ಭಾಗಕ್ಕೆ ತಂತಿಯ ಮುಳ್ಳುಗಳು ಹೊಕ್ಕಿದ್ದು ರಕ್ತಸ್ರಾವ ಆಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
ಬೆಳಗ್ಗಿನ ಜಾವ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟರೂ ಇನ್ನೂ ಸ್ಥಳಕ್ಕೆ ಬಂದಿಲ್ಲ. ಇದರಿಂದ ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ಸಿಲುಕಿ ಹಾಕಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಜನರ ದಂಡೇ ತೋಟದ ಬಳಿ ಜಮಾಯಿಸಿದ್ದು, ಕೆಲವರು ತಮ್ಮ ಮೊಬೈಲ್ ನಲ್ಲಿ ಚಿರತೆ ಫೋಟೋ ಕ್ಲಿಕ್ಕಿಸಿದ್ದಾರೆ.