ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಚಿರತೆಯೊಂದು ಸೈಲೆಂಟಾಗಿ ರಾತ್ರಿ ಎಂಟ್ರಿ ಕೊಟ್ಟಿದೆ.
ಗಂಗಾವತಿಯ ಸಾಯಿನಗರದ ಸಿಮೆಂಟ್ ಬ್ರಿಕ್ಸ್ ಘಟಕದ ಆವರಣದಲ್ಲಿ ತಡರಾತ್ರಿಗೂ ಮುನ್ನವೇ ಬಂದ ಚಿರತೆ ಆವರಣದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಈ ಎಲ್ಲ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Advertisement
Advertisement
ಮುಂಜಾನೆ ಎದ್ದು ಬಂದ ಸಿಮೆಂಟ್ ಬ್ರಿಕ್ಸ್ ಘಟಕದ ಮಾಲೀಕ ತಾನು ಸಾಕಿದ ನಾಯಿಯನ್ನು ಹುಡುಕಿದ್ದಾರೆ. ಅದು ಕಾಣದೆ ಇದ್ದಾಗ ಕಚೇರಿಯಲ್ಲಿದ್ದ ಸಿಸಿಟಿವಿಯನ್ನು ಚೆಕ್ ಮಾಡಿದಾಗ ಚಿರತೆ ಬಂದು ನಾಯಿಯನ್ನು ಎಳೆದುಕೊಂಡು ಹೋಗಿರುವ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ.
Advertisement
ಈ ಕುರಿತು ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು ಪ್ರತಿ ವರ್ಷ ಮಾರ್ಚ್, ಎಪ್ರಿಲ್, ಮೇ, ಜೂನ್ ವೇಳೆ ಆಹಾರ ಅರಿಸಿ ಕಾಡು ಪ್ರಾಣಿಗಳು ನಗರಕ್ಕೆ ಲಗ್ಗೆ ಇಡುತ್ತಿವೆ. ಕಳೆದ ಬಾರಿ ಕೂಡ ಚಿರತೆ, ಕರಡಿಗಳು ಬಂದು ಹೋಗಿದ್ದವು. ಈ ಕುರಿತು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲಾ. ಹೇಳಿದರೆ ಅವು ಬರ್ತಾವೆ ಹೋಗ್ತಾವೆ ಎಂಬ ಹಾರಿಕೆ ಉತ್ತರ ನಿಡ್ತಾರೆ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.