ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿಗೆ ಹೃದಯಾಘಾತ – ಮಗ ಮನೆಗೆ ಬಂದಾಗ ಅಸುನೀಗಿದ ಅಮ್ಮ

Advertisements

ಬೆಳಗಾವಿ: ಮಗನ ಮೇಲೆ ಚಿರತೆ ದಾಳಿಯ ಸುದ್ದಿಯನ್ನು ಕೇಳಿದ ತಾಯಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ಖನಗಾವಿ ಕೆ.ಹೆಚ್ ಗ್ರಾಮದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಬೆಳಗಾವಿಯ ಜಾಧವ್ ನಗರದಲ್ಲಿ ಖನಗಾವಿ ಕೆಎಚ್ ಗ್ರಾಮದ ಕಟ್ಟಡ ಕಾರ್ಮಿಕನಾಗಿದ್ದ ಸಿದರಾಯಿ ಮಿರಜಕರ್ (38) ಮೇಲೆ ಚಿರತೆ ದಾಳಿ ನಡೆಸಿತು. ದಾಳಿಯಲ್ಲಿ ಸಿದರಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ವೋಡ್ಕಾ ಕುಡಿಯುವಂತೆ ಒತ್ತಾಯಿಸಿದ ಶಿಕ್ಷಕ

Advertisements

ಇತ್ತ ಸಿದರಾಯಿ ಮೇಲಿನ ಚಿರತೆ ದಾಳಿಯ ಸುದ್ದಿಯನ್ನು ಕೇಳಿದ ತಾಯಿ ಶಾಂತಾ ಮಿರಜಕರ್ (65)ಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗ ಆಸ್ಪತ್ರೆಯಿಂದ ಮನೆಗೆ ಬರುತ್ತಿದ್ದಂತೆ ತಾಯಿ ಸಾವಿನ ಸುದ್ದಿ ಕೇಳಿ ಮರುಗಿದ್ದಾರೆ. ಖನಗಾವಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

Live Tv

Advertisements
Exit mobile version