ಕೊಟ್ಟಿಗೆಗೆ ಚಿರತೆ ದಾಳಿ- 6 ಕೊಂದು 4 ಮೇಕೆಗಳನ್ನು ಹೊತ್ತೊಯ್ದ ಚಿರತೆ

Public TV
1 Min Read
MANDYA CHEETAH 3

ಮಂಡ್ಯ: ಕುರಿ ಕೊಟ್ಟಿಗೆಗೆ ಚಿರತೆಗಳು ನುಗ್ಗಿ 6 ಮೇಕೆಗಳನ್ನು ಕೊಂದು ಅದರಲ್ಲಿ 4 ಮೇಕೆಗಳನ್ನು ಹೊತ್ತು ಹೊಯ್ದುರುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ಜರುಗಿದೆ.

MANDYA CHEETAH 1

ಭಾನುವಾರ ರಾತ್ರಿ ಗಿರಿಯಾರಗಳ್ಳಿಯ ನಾಗೇಗೌಡ ಎಂಬ ರೈತ ಕೊಟ್ಟಿಗೆಯಲ್ಲಿ 18 ಮೇಕೆ (Goat) ಗಳನ್ನು ಕಟ್ಟಿದ್ದರು. ಮಧ್ಯರಾತ್ರಿ ಚಿರತೆಗಳು ಕೊಟ್ಟಿಗೆ ಬಂದಿದ್ದು, ಅಲ್ಲಿದ್ದ 18 ಮೇಕೆಗಳ ಪೈಕಿ 6 ಮೇಕೆಗಳಿಗೆ ಕಚ್ಚಿ ಅವುಗಳ ರಕ್ತ ಕುಡಿದು ಅರ್ಧ ಮಾಂಸವನ್ನು ತಿಂದಿವೆ. ಅಲ್ಲದೇ ಇನ್ನೂ 4 ಮೇಕೆಗಳನ್ನು ಚಿರತೆ (Cheetah) ಗಳು ಹೊತ್ತೊಯ್ದಿವೆ. ಬೆಳಗ್ಗೆ ನಾಗೇಗೌಡ ಎಂದಿನಂತೆ ಕೊಟ್ಟಿಗೆ ಬಳಿ ನೋಡಿದಾಗ ಚಿರತೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!

MANDYA CHEETAH 2 1

ಎರಡರಿಂದ ಮೂರು ಚಿರತೆಗಳು ದಾಳಿ ನಡೆಸಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿ, ಆರ್ಥಿಕ ಸಹಾಯ ಮಾಡಿ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಸ್ಥಳೀಯರು, ಕೂಡಲೇ ಇಲ್ಲಿ ಚಿರತೆ ಸೆರೆಗಾಗಿ ಬೋನ್ ಇರಿಸಬೇಕು, ನಮಗೆ ಜಮೀನಿಗೆ ಹೋಗಲು ಸಹ ಭಯವಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *