ಇಂಟರ್ನೆಟ್‌ನಲ್ಲಿ ಭಾರೀ ವೈರಲ್ ಆಗಿದ್ದ ನಾಯಿ ಇನ್ನಿಲ್ಲ

Public TV
1 Min Read
Cheems dog

ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ (Memes) ಮೂಲಕ ನೆಟ್ಟಿಗರನ್ನು ಸೆಳೆದಿದ್ದ ಚೀಮ್ಸ್ (Cheems) ಹೆಸರಿನ ನಾಯಿ (Dog) ಸಾವನ್ನಪ್ಪಿರುವುದಾಗಿ ಅದರ ಮಾಲೀಕರು ತಿಳಿಸಿದ್ದಾರೆ.

ಹಾಸ್ಯಮಯ ಸನ್ನಿವೇಶಗಳನ್ನು ಮೀಮ್ಸ್‌ಗಳ ಮೂಲಕ ರಚಿಸುವ ಸಂದರ್ಭದಲ್ಲಿ ಚೀಮ್ಸ್‌ನ ವೈರಲ್ ಫೋಟೋವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆದರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚೀಮ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭ ಮಲಗಿದ್ದು, ಬಳಿಕ ಅದು ಎದ್ದೇಳಲೇ ಇಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.

 

View this post on Instagram

 

A post shared by Cheems_Balltze (@balltze)

ಚೀಮ್ಸ್‌ನ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಲೀಕರು, ಶುಕ್ರವಾರ ನಾಯಿಯನ್ನು ಕಿಮೋಥೆರಪಿಗೆ ಒಳಪಡಿಸಲು ನಾವು ನಿರ್ಧರಿಸಿದ್ದೆವು. ಆದರೆ ಆಗಾಗಲೇ ತುಂಬಾ ತಡವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ

ಮೂಲಗಳ ಪ್ರಕಾರ ಬಾಲ್ಟ್ಜ್ (Balltze) ಹೆಸರಿನ ನಾಯಿಯ ಫೋಟೋ 2017ರಲ್ಲಿ ವೈರಲ್ ಆಗಿದ್ದು, ಬಳಿಕ ಭಾರೀ ಪ್ರಮಾಣದಲ್ಲಿ ಮೀಮ್ಸ್‌ಗಳಲ್ಲಿ ಬಳಕೆಯಾಗಿತ್ತು. ನೆಟ್ಟಿಗರು ಇದು ಚೀಮ್ಸ್ ಅನ್ನು ಹೋಲುತ್ತದೆ ಎಂದು ಕಾಮೆಂಟ್ ಮಾಡಿದ್ದು, ಅಲ್ಲಿಂದ ಬಾಲ್ಟ್ಜ್ ಇಂಟರ್ನೆಟ್‌ನಲ್ಲಿ ಭಾರೀ ಖ್ಯಾತಿ ಗಳಿಸಿದ್ದಾಗಿ ಅದರ ಮಾಲೀಕರು ಹೇಳಿದ್ದಾರೆ.

ಚೀಮ್ಸ್ ಸಾವು ಲಕ್ಷಾಂತರ ಅಭಿಮಾನಿಗಳಿಗೆ ದುಃಖ ತಂದಿದೆ. ಚೀಮ್ಸ್ ಅನಾರೋಗ್ಯಕ್ಕೊಳಗಾದಾಗ ಅದಕ್ಕೆ ಚಿಕಿತ್ಸೆ ನೀಡಿದ ವೆಟ್ಸ್ ಮಾಲೀಕರು ಧನ್ಯವಾದ ಹೇಳಿದ್ದಾರೆ. ಚೀಮ್ಸ್ ಚಿಕಿತ್ಸೆಗಾಗಿ ಸಂಗ್ರಹಿಸಲಾಗಿದ್ದ ಹಣವನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಡಿಯಲು ಶಿಕ್ಷಕ ಹಣ ಕೇಳ್ತಾನೆ.. ವಾಚ್‍ಮ್ಯಾನ್‍ನಿಂದ ಕಿರುಕುಳ – ಪೊಲೀಸ್ ಕಮಿಷನರ್‌ಗೆ ವಿದ್ಯಾರ್ಥಿನಿಯರ ಪತ್ರ

Web Stories

Share This Article