ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ (Maharashtra polls) ಇವಿಎಂ ತಿರುಚಲಾಗಿದೆ ಎಂಬ ಆರೋಪ ಸುಳ್ಳು. ಇವಿಎಂ ತಿರುಚಿಲ್ಲ ಎಂಬುದು ಪರಿಶೀಲನೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಚುನಾವಣಾ ಆಯೋಗ (Election Commission) ಪುನರುಚ್ಚರಿಸಿದೆ.
10 ಅಭ್ಯರ್ಥಿಗಳ ಅರ್ಜಿಗಳ ಆಧಾರದ ಮೇಲೆ 10 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಪರಿಶೀಲನೆ (ಸಿ & ವಿ) ಪ್ರಕ್ರಿಯೆ ನಡೆಸಲಾಯಿತು. ಇವಿಎಂ ಫಲಿತಾಂಶಗಳು ಮತ್ತು ವಿವಿಪ್ಯಾಟ್ ಸ್ಲಿಪ್‌ಗಳ ನಡುವೆ ಮತ ಎಣಿಕೆಯಲ್ಲಿ ಯಾವುದೇ ಮಿಸ್‌ಮ್ಯಾಚ್ ಆಗಿಲ್ಲ ಎಂದು ಆಯೋಗ ದೃಢಪಡಿಸಿತು. ಇದನ್ನೂ ಓದಿ: ಮತದಾರರ ಗೌಪ್ಯತೆ & ಭದ್ರತೆ ಮೇಲೆ ಪರಿಣಾಮ: ಮತದಾನದ ದೃಶ್ಯಗಳ ಬೇಡಿಕೆಗೆ ಚುನಾವಣಾ ಆಯೋಗ ಪ್ರತಿಕ್ರಿಯೆ
EC says, “As per instructions issued by the Commission on 17th June 2025, the Chief Electoral Officer, Maharashtra has completed the EVM Checking and Verification (C&V) pertaining to General Elections to Maharashtra Legislative Assembly-2024. Based on the applications received… pic.twitter.com/EC8KAZuaPl
— ANI (@ANI) July 31, 2025
ಎಲ್ಲಾ ಸಂದರ್ಭಗಳಲ್ಲಿ ಯಂತ್ರಗಳು, ಬ್ಯಾಲೆಟ್ ಯೂನಿಟ್‌ಗಳು, ನಿಯಂತ್ರಣ ಘಟಕಗಳು ಮತ್ತು ವಿವಿಪ್ಯಾಟ್‌ಗಳು ಪರಿಶೀಲನೆಯಲ್ಲಿ ಪಾಸ್ ಆಗಿವೆ ಎಂದು ಆಯೋಗ ತಿಳಿಸಿದೆ. ಜೂ.17 ರಂದು ಹೊರಡಿಸಲಾದ ಸೂಚನೆಗಳಡಿ ಮತ್ತು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ನಡೆಸಿದ ಸೂಚನೆಗಳ ಅಡಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಯಿತು.
2024 ರ ರಾಜ್ಯ ಚುನಾವಣೆಯಲ್ಲಿ ಸೋತಿದ್ದ ಹತ್ತು ಅರ್ಜಿದಾರರಲ್ಲಿ ಎಂಟು ಮಂದಿ ಪರಿಶೀಲನೆಗೆ ಹಾಜರಿದ್ದರು. 48 ಬ್ಯಾಲೆಟ್ ಯೂನಿಟ್‌ಗಳು, 31 ಕಂಟ್ರೋಲ್ ಯೂನಿಟ್‌ಗಳು ಮತ್ತು 31 ವಿವಿಪ್ಯಾಟ್‌ಗಳಲ್ಲಿ ಪರಿಶೀಲನೆ ನಡೆಸಲಾಯಿತು. ತಯಾರಕ ECIL (ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ನ ಅಧಿಕೃತ ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ – ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಬಾಂಬ್
147-ಕೊಪ್ರಿ-ಪಚ್ಪಖಾಡಿ, 148-ಥಾಣೆ, 211-ಖಡಕ್ವಾಸ್ಲಾ ಮತ್ತು 229-ಮಜಲಗಾಂವ್‌ನಂತಹ ಕ್ಷೇತ್ರಗಳಲ್ಲಿ, ಅಭ್ಯರ್ಥಿಗಳ ಕೋರಿಕೆಯ ಆಧಾರದ ಮೇಲೆ ತಲಾ ಮೂರು ಸೆಟ್ ಇವಿಎಂಗಳಲ್ಲಿ (EVM) ಪರಿಶೀಲನೆ ನಡೆಸಲಾಯಿತು. ಎಲ್ಲಾ ಯಂತ್ರಗಳು ಪಾಸ್ ಆಗಿದ್ದು, ಇಸಿಐಎಲ್ ಎಂಜಿನಿಯರ್‌ಗಳಿಂದ ಪ್ರಮಾಣೀಕರಿಸಲ್ಪಟ್ಟಿವೆ.