ಪ್ರೇಯಸಿ ಜೊತೆ ಇಟಲಿಗೆ ಹೋಗಿದ್ದ ಪತಿಗೆ ಕೊರೊನಾ – ಈಗ ಪತ್ನಿಗೆ ಗೃಹಬಂಧನ

Public TV
1 Min Read
love complaint 1

– ಮರಳಿ ಮನೆಗೆ ಬಂದಾಗ ಸೋಂಕು ಪತ್ತೆ
– ಪತ್ನಿಗೆ ಬಿಸಿನೆಸ್ ಟ್ರಿಪ್ ಎಂದಿದ್ದ ಪತಿ

ಲಂಡನ್: ತನ್ನ ಪತ್ನಿಗೆ ಸುಳ್ಳು ಹೇಳಿ ಪ್ರೇಯಸಿ ಜೊತೆ ಎಂಜಾಯ್ ಮಾಡಲು ಇಟಲಿಗೆ ಹಾರಿದ ಪತಿಯೊಬ್ಬ ಈಗ ಕೊರೊನಾ ವೈರಸ್‍ನಿಂದ ಬಳಲುತ್ತಿದ್ದಾನೆ.

ವ್ಯಕ್ತಿ ತನ್ನ ಪತ್ನಿಗೆ ಬಿಜಿನೆಸ್ ಟ್ರಿಪ್ ಇದೆ ಎಂದು ಸುಳ್ಳು ಹೇಳಿ ಪ್ರೇಯಸಿ ಜೊತೆ ಎಂಜಾಯ್ ಮಾಡಲು ಇಟಲಿಗೆ ಹೋಗಿದ್ದನು. ಇಟಲಿಯಿಂದ ವಾಪಸ್ ಬರುತ್ತಿದ್ದಂತೆ ವ್ಯಕ್ತಿಯ ದೇಹದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ತಕ್ಷಣ ಆತ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದಾಗ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

Corona Virus 9

ಉತ್ತರ ಇಂಗ್ಲೆಂಡ್‍ನಲ್ಲಿ ವ್ಯಕ್ತಿಯ ಪತ್ನಿ ಗೃಹ ಬಂಧನದಲ್ಲಿ ಇದ್ದಾಳೆ. ಅಲ್ಲದೆ ಪತಿಗೆ ಹೇಗೆ ಸೋಂಕು ತಗುಲಿದೆ ಎಂಬುದು ಪತ್ನಿಗೆ ಇದುವರೆಗೂ ಗೊತ್ತಾಗಲಿಲ್ಲ. ಸದ್ಯ ವ್ಯಕ್ತಿ ಉತ್ತರ ಇಂಗ್ಲೆಂಡ್‍ನ ವೈದ್ಯರ ಬಳಿ ತನಗೆ ಈ ವೈರಸ್ ಹೇಗೆ ತಗುಲಿದೆ ಎಂಬುದನ್ನು ವಿವರಿಸಿದ್ದಾನೆ.

ತನ್ನ ಪತಿ ಇಟಲಿಗೆ ಹೋದ ವಿಷಯ ಪತ್ನಿಗೆ ಗೊತ್ತೇ ಆಗಲಿಲ್ಲ. ಪತಿ ಇಟಲಿಯಿಂದ ಬಂದಾಗ ಆತನ ದೇಹದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಸ್ವತಃ ಆತನೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ.

Corona Lab

ವೈದ್ಯರು ಪರೀಕ್ಷೆ ನಡೆಸಿದ ನಂತರ ವ್ಯಕ್ತಿ ಮಹಿಳೆ ಜೊತೆ ಅಕ್ರಮ ಸಂಬಂಧ ಇರುವುದನ್ನು ಬಹಿರಂಗಪಡಿಸಿದ್ದನು. ಆದರೆ ಆಕೆಯ ಹೆಸರನ್ನು ಹೇಳಲು ನಿರಾಕರಿಸಿದ್ದನು. ಇಟಲಿಯಲ್ಲಿ ನಡೆದ ಪ್ರತಿ ವಿಷಯವನ್ನು ವ್ಯಕ್ತಿ ವೈದ್ಯರ ಬಳಿ ಹೇಳಿದ್ದಾನೆ. ಅಲ್ಲದೆ ಇದು ಯಾವುದು ತನ್ನ ಪತ್ನಿಗೆ ಗೊತ್ತಿಲ್ಲ ಎಂಬುದನ್ನು ಸಹ ಹೇಳಿದ್ದಾನೆ.

ಈ ಪ್ರಕರಣ ಇಡೀ ವಿಶ್ವದಲ್ಲೇ ವೈರಲ್ ಆಗಿದೆ. ಅಲ್ಲದೆ ವ್ಯಕ್ತಿಯ ಪರಿಸ್ಥಿತಿ ತಮಾಷೆಯಾಗಿದ್ದರು, ಅದರ ಗಂಭೀರತೆ ಕಡಿಮೆ ಇಲ್ಲ. ಕೊರೊನಾದಿಂದ ವ್ಯಕ್ತಿಯ ಅಕ್ರಮ ಸಂಬಂಧ ಬಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *