ಬಳ್ಳಾರಿ: ಬಿಜೆಪಿ ಟಿಕೆಟ್ (BJP Ticket) ಕೊಡಿಸುವುದಾಗಿ ನಿವೃತ್ತ ಎಂಜಿನಿಯರ್ ಒಬ್ಬರಿಗೆ ಕೋಟಿ ಕೋಟಿ ಹಣ ವಂಚಿಸಿದ ಆರೋಪದ (Fraud Case) ಮೇಲೆ ಬಿಜೆಪಿಯ ಮಾಜಿ ಮುಖಂಡ ಹಾಗೂ ಹಾಲಿ ಕೆಆರ್‌ಪಿಪಿ ಪಕ್ಷದ ನಾಯಕ ರೇವಣ ಸಿದ್ದಪ್ಪನನ್ನು ಕೊಟ್ಟೂರು ಪೊಲೀಸರು (Police) ಬಂಧಿಸಿದ್ದಾರೆ.
ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆರೋಪಿ ರೇವಣ ಸಿದ್ದಪ್ಪ, ಪುತ್ತೂರು ಮೂಲದ ಶೇಖರ್ ಜೊತೆ ಸೇರಿ ಕೊಟ್ಟೂರಿನ ನಿವೃತ್ತ ಎಂಜಿನಿಯರ್ ಶಿವಮೂರ್ತಿ ಅವರಿಗೆ 1.95 ಕೋಟಿ ರೂ. ಪಡೆದು ವಂಚಿಸಿದ್ದಾನೆ. ಬೇರೆಯವರಿಗೆ ಟಿಕೆಟ್ ಘೋಷಣೆಯಾದ ಬಳಿಕ ವಿಚಾರ ತಿಳಿದ ಶಿವಮೂರ್ತಿ ಪ್ರಶ್ನಿಸಿದಾಗ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‍ಗಾಗಿ ಕೋಟಿ ಕೋಟಿ ಡೀಲ್ – ಚೈತ್ರಾ ಮಾದರಿ ಮತ್ತೊಂದು ಪ್ರಕರಣ ಬಯಲಿಗೆ
Advertisement
Advertisement
ಇದಾದ ಬಳಿಕ ಊರಿನ ಮುಖಂಡರು ರಾಜಿ ಕೂಡ ಮಾಡಿಸಿದ್ದರು. ಈ ವೇಳೆ ಆರೋಪಿ ಹಣ ವಾಪಸ್ ನೀಡುವುದಾಗಿ ಎರಡು ಚೆಕ್‍ಗಳನ್ನು ನೀಡಿದ್ದ. ಈ ಚೆಕ್‍ಗಳು ಬೌನ್ಸ್ ಆಗಿದ್ದವು. ಬಳಿಕ ಈ ಬಗ್ಗೆ ಶಿವಮೂರ್ತಿ ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Advertisement
Advertisement
ಪ್ರಕರಣ ದಾಖಲಾದ ದಿನದಿಂದ ಪ್ರಕರಣದ ಪ್ರಮುಖ ಆರೋಪಿ ರೇವಣ ಸಿದ್ದಪ್ಪ ತಲೆ ಮರೆಸಿಕೊಂಡಿದ್ದ. ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನವನ್ನು ವಿಜಯನಗರ (Vijayanagar) ಎಸ್‍ಪಿ ಶ್ರೀಹರಿಬಾಬು ಅವರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ದರೋಡೆ, ಅತ್ಯಾಚಾರ, ಜೈಲಿಗೆ ಹೋಗೋದ್ರಲ್ಲಿ ಮುಸ್ಲಿಮರೇ ನಂ.1- ವಿವಾದಕ್ಕೀಡಾದ ಅಜ್ಮಲ್ ಹೇಳಿಕೆ
Web Stories