ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಜುಲೈ 15ರಂದು ತೆರೆಕಾಣಲಿದೆ. ತೆರೆಗೆ ಬರಲು ಇನ್ನೂ ಎರಡ್ಮೂರು ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಹೊಸ ಆವೇಗವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಂತಿರೋ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ.
ಇಷ್ಟು ದಿನ ಕಾದದ್ದೂ ಸಾರ್ಥಕವೆನಿಸುವಂಥಾ ಕಂಟೆಂಟ್ ಈ ಸಿನಿಮಾದಲ್ಲಿದೆ ಎಂಬ ನಿಖರ ಸುಳಿವು ಬಿಟ್ಟುಕೊಟ್ಟಿರುವ ಈ ಟ್ರೈಲರ್‌ಗೆ ವ್ಯಾಪಕ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಅರೆಕ್ಷಣವೂ ತುದೀ ಸೀಟಿನಿಂದ ಆಚೀಚೆ ಕದಲದಂಥಾ ವೇಗದೊಂದಿಗೆ ಚೇಸ್ ಸಾಗಲಿದೆ ಎಂಬುದು ನೋಡುಗರೆಲ್ಲರಿಗೂ ಪಕ್ಕಾ ಆದಂತಾಗಿದೆ. ಇಂತಹದ್ದೊಂದು ಅಭಿಪ್ರಾಯ ಮೂಡಿಸುವ ಮೂಲಕ ಚಿತ್ರತಂಡದ ನಿಜವಾದ ಉದ್ದೇಶ ಸಾಕಾರಗೊಂಡಿದೆ. ಇದನ್ನೂ ಓದಿ: ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್‍ನಂತೆ ಕಾಣಲು 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿಗೊಳಗಾದ ಮಾಡೆಲ್
ಚೇಸ್ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೊಳಗೊಂಡಿರೋ ಚಿತ್ರ. ಅದೆಲ್ಲವೂ ಈ ಟ್ರೈಲರ್ ಮೂಲಕ ಅದು ಮತ್ತಷ್ಟು ಸ್ಪಷ್ಟವಾಗಿದೆ. ಒಂದು ಮರ್ಡರ್ ಮಿಸ್ಟರಿ ಮತ್ತು ಅದರ ಸುತ್ತ ಬಿಚ್ಚಿಕೊಳ್ಳುವ ಚಿತ್ರವಿಚಿತ್ರ ಸನ್ನಿವೇಶಗಳು ಹಾಗೂ ಅತ್ಯಂತ ಚುರುಕಾದ ನಿರೂಪಣೆಯ ಸುಳಿವಿನೊಂದಿಗೆ ಈ ಟ್ರೈಲರ್ ಅನ್ನು ಸೆಳೆದುಕೊಂಡಿದೆ. ಬಿಡುಗಡೆಯಾದ ಕೆಲವೇ ಸಮಯದೊಳಗೆ ಈ ಟ್ರೈಲರ್ ಫೇಮಸ್ ಆಗಿ ಮುನ್ನುಗ್ಗುತ್ತಿದೆ.
ಇಡೀ ಚಿತ್ರದ ಆಂತರ್ಯವನ್ನು ಸೀಮಿತ ಅವಧಿಯಲ್ಲಿ ಹಿಡಿದಿಟ್ಟು ಟ್ರೈಲರ್ ಮೂಲಕ ಕಟ್ಟಿ ಕೊಡೋದೊಂದು ಕುಸುರಿ ಕೆಲಸ. ಅದರಲ್ಲಿ ನಿರ್ದೇಶಕ ವಿಲೋಕ್ ಶೆಟ್ಟಿ ಗೆಲುವು ದಾಖಲಿಸಿದ್ದಾರೆ. ಇದುವರೆಗೆ ಚೇಸ್ ಬಗ್ಗೆ ಮೂಡಿದ್ದ ಕುತೂಹಲವನ್ನು ಈ ಮೂಲಕ ಮತ್ತಷ್ಟು ತೀವ್ರವಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ದೂರು ನೀಡಿದರೂ ಕಿಚ್ಚ ಸುದೀಪ್ ಕುರಿತಾದ ಅವಹೇಳನ ನಿಲ್ಲಿಸಿಲ್ಲ ‘ಅಹೋರಾತ್ರ’ ಶಿಷ್ಯ ಚರಣ್
ಹೀಗೆ ಹಬ್ಬಿಕೊಂಡಿರುವ ಸದಭಿಪ್ರಾಯಗಳ ಹಿಂದೆ ನಿರ್ದೇಶಕ ವಿಲೋಕ್ ಶೆಟ್ಟಿ ಮತ್ತವರ ತಂಡದ ವರ್ಷಾಂತರಗಳ ಪರಿಶ್ರಮವಿದೆ. ಅದು ಈ ಟ್ರೈಲರ್‌ಮೂಲಕವೇ ಸಾರ್ಥಕ ಕಂಡಿದೆ. ಯಶಸ್ವಿ ಟ್ರೈಲರ್ ಒಂದು ಯಾವ ಸ್ವರೂಪದಲ್ಲಿ ಸದ್ದು ಮಾಡಬಹುದೋ ಅಂಥಾ ರೀತಿಯಲ್ಲಿಯೇ ಈ ಟ್ರೈಲರ್ ಜನಮಾನಸವನ್ನು ಸೆಳೆದುಕೊಂಡಿದೆ. ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ರಾಜೇಶ್ ನಟರಂಗ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಮುಂತಾದವರ ಪಾತ್ರಗಳೂ ಇದರಲ್ಲಿ ತೆರೆದುಕೊಂಡಿವೆ. ಹೀಗೆ ಮತ್ತಷ್ಟು ಪ್ರೇಕ್ಷಕರನ್ನು ಫಿದಾ ಆಗಿಸಿಕೊಂಡಿರುವ ಚೇಸ್ ಇದೇ 15ರಂದು ತೆರೆ ಕಾಣುತ್ತಿದೆ. ಇದನ್ನೂ ಓದಿ: ಕಾಳಿ ವಿವಾದ: ಆ.6ರಂದು ಹಾಜರಾಗುವಂತೆ ಲೀನಾಗೆ ದೆಹಲಿ ಹೈಕೋರ್ಟ್ ಸಮನ್ಸ್
ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದು, ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಶಿವ್‌ಶೆಟ್ಟಿ ಕಾರ್ಯನಿರ್ವಹಿಸಿದ್ದು, ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್.ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ.