ಜೈಪುರ: ವಿಮಾನವೊಂದು (Chartered Plane) ಹಾರಾಟ ನಡೆಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡು ಪತನಗೊಂಡಿರುವ ಘಟನೆ ರಾಜಸ್ಥಾನದ ಭರತ್‍ಪುರ (Rajasthan’s Bharatpur) ಸಮೀಪ ನಡೆದಿದೆ.
Advertisement
ರಾಜಸ್ಥಾನದ ಭರತ್‍ಪುರದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿದ್ದ ವಿಮಾನ (Plane) ಕೆಳಗೆ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ, ಇನ್ನಿತರ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಮಾನ ಪತನಗೊಂಡ ಬಳಿಕ ವಿಮಾನದಲ್ಲಿದ್ದ ಪೈಲಟ್ ಕೂಡ ಸಿಕ್ಕಿಲ್ಲ. ಪೈಲಟ್‍ಗಾಗಿ ಹುಡುಕಾಟ ಆರಂಭವಾಗಿದ್ದು, ವಿಮಾನದಲ್ಲಿ ಯಾರಿದ್ದರು, ಯಾವ ವಿಮಾನ ಎಂಬ ಮಾಹಿತಿಯೂ ಸ್ಪಷ್ಟವಾಗಿ ಲಭ್ಯವಾಗಿಲ್ಲ. ಇದನ್ನೂ ಓದಿ: AirCraft Crash: ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ
Advertisement
A chartered #Aircraft crashed in #Bharatpur. Police and administration have been sent to the spot. More details are awaited. pic.twitter.com/890StJ78Ta
— Smriti Sharma (@SmritiSharma_) January 28, 2023
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡ ಭರತ್‍ಪುರದ ಎಸ್‍ಪಿ (SP) ಶ್ಯಾಮ್‍ಸಿಂಗ್, ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಳಗೆ ಬಿದ್ದಿದೆ. ಗಾಳಿಯ ತೀವ್ರತೆಗೆ ಇಡೀ ವಿಮಾನ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಇದು ಯಾವ ವಿಮಾನ. ಭಾರತೀಯ ವಾಯುಪಡೆಗೆ ಸೇರಿದ್ದೋ ಎಂಬುದರ ಕುರಿತಾಗಿ ವಾಯುಪಡೆ ಘಟಕದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿದ್ದು, ಪೈಲಟ್ ಪತ್ತೆ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ, 5 ಸೀಟು ಗೆದ್ದು ತೋರಿಸಲಿ: HDK ಸವಾಲ್
Advertisement
Rajasthan | Wreckage of jet seen in Bharatpur. Officials and local administration are present at the spot.
Earlier report as confirmed by Bharatpur District Collector said charter jet, however, defence sources confirm IAF jets crashed in the vicinity. So, more details awaited. pic.twitter.com/akEXisXtl8
— ANI (@ANI) January 28, 2023
ಈ ಮೊದಲು ಮಧ್ಯಪ್ರದೇಶದ (Madhya Pradeshs) ಗ್ವಾಲಿಯರ್‌ನಲ್ಲಿ (Gwalior) ತಾಲೀಮು ನಡೆಸುತ್ತಿದ್ದ ಭಾರತದ ವಾಯು ಸೇನೆಯ ವಿಮಾನಗಳಾದ ಸುಖೋಯ್-30 (Sukhoi 30) ಮತ್ತು ಮಿರಾಜ್ 2000 (Mirage 2000) ವಿಮಾನಗಳು ಪತನ ಗೊಂಡಿತ್ತು. ಈ ಸ್ಥಳದಿಂದ 100 ಕಿ.ಮೀ ದೂರದಲ್ಲಿರುವ ಭರತ್‍ಪುರದಲ್ಲಿ ಮತ್ತೊಂದು ವಿಮಾನ ದುರಂತ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k