ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ (FSL Report) ದರ್ಶನ್ ಗ್ಯಾಂಗ್ ಡಿಲೀಟ್ ಮಾಡಿದ್ದ ದೃಶ್ಯ ಸಿಕ್ಕಿದೆ.
ದರ್ಶನ್ ಮತ್ತು ಇತರರಿಂದ ಸ್ವಾಧೀನಪಡಿಸಿಕೊಂಡ ರಕ್ತದ ಕಲೆಗಳಿದ್ದ ಬಟ್ಟೆ, ಚಪ್ಪಲಿಗಳನ್ನು, ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇಷ್ಟೇ ಅಲ್ಲದೇ ಡಿಲೀಟ್ ಮಾಡಿದ್ದ ಮೊಬೈಲ್, ಸಿಸಿಟಿವಿ ಡಿವಿಆರ್‌ಗಳನ್ನು ರಿಟ್ರೀವ್ ಮಾಡಲು ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿ ನೀಡಿತ್ತು. ಈ ಬಗ್ಗೆಯೂ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ?
ದರ್ಶನ್ ಮನೆಯಲ್ಲಿದ್ದ ಲಾಠಿ, ರಿಪೀಸ್ ಪಟ್ಟಿ, ದೊಣ್ಣೆ, ಬೆಲ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿತ್ತು. ನಟಿ ಪವಿತ್ರಾಗೌಡ ಚಪ್ಪಲಿ ಮೇಲೆಯೂ ರಕ್ತದ ಕಲೆ ಸಿಕ್ಕಿತ್ತು. ಡಿಎನ್‌ಎ ಪರೀಕ್ಷೆಯಿಂದ ಪತ್ತೆಯಾದ ರಕ್ತ ಮಾದರಿ ರೇಣುಕಾಸ್ವಾಮಿಯದ್ದೇ ಎನ್ನುವುದು ದೃಢಪಟ್ಟಿದೆ. ಇದನ್ನೂ ಓದಿ: ದರ್ಶನ್ ಸೇರಿ 14 ಮಂದಿ ವಿರುದ್ಧ ಕೊಲೆ ಕೇಸ್ – ಅಂಕಿಗಳಲ್ಲಿ ಚಾರ್ಜ್‌ಶೀಟ್
ರೇಣುಕಾ ಕೊಲೆ ಬಳಿಕ ದರ್ಶನ್, ಪವಿತ್ರಾಗೌಡ ಮಾತನಾಡಿದ್ದರು. ಆದರೆ ಸಿಕ್ಕಿಬೀಳುವ ಭಯದಲ್ಲಿ ಸಿಸಿಟಿವಿ ವಿಡಿಯೋವನ್ನು ದರ್ಶನ್ ಗ್ಯಾಂಗ್ ಡಿಲೀಟ್ ಮಾಡಿತ್ತು. ಸಿಸಿಟಿವಿ ಡಿವಿಆರ್‌ಗಳ ರಿಟ್ರೀವ್ ಮಾಡಿದಾಗ ದರ್ಶನ್ ಡಿಲೀಟ್ ಮಾಡಿಸಿದ ದೃಶ್ಯಗಳು ಪತ್ತೆಯಾಗಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಲ್ಲಿ ಆರೋಪಿ ದೀಪಕ್ ಕೂದಲು ಪತ್ತೆಯಾಗಿದೆ.
ಇಡೀ ಪ್ರಕರಣ ತನಿಖೆಯಲ್ಲಿ ಹೈದರಾಬಾದ್ ಎಫ್‌ಎಸ್‌ಎಲ್ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ.