– ಒಂದೇ ರೀತಿಯ ವೇಷಭೂಷಣ ಧರಿಸಿ ಮಂತ್ರಪಠಣ
ಬೆಳಗಾವಿ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ (RamLalla) ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದಾದ್ಯಂತ ನೆಲೆಸಿರುವ ರಾಮಭಕ್ತರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿಯೂ ವಿಶಿಷ್ಟ ರೀತಿಯಲ್ಲಿ ಪ್ರಾಣಪ್ರತಿಷ್ಠೆಯನ್ನು ಕೊಂಡಾಡಲು ಸಜ್ಜಾಗಿದ್ದಾರೆ.
Advertisement
ಈ ನಡುವೆ ಬೆಳಗಾವಿಯ (Belagavi) ಗೋಕಾಕ್ ನಗರದ ಮಹಾಲಕ್ಷ್ಮಿ ದೇವಿ ಕಲ್ಯಾಣ ಮಂಟಪದಲ್ಲಿ ಸುಮಾರು 3,000 ಮಹಿಳೆಯರು ಏಕಕಾಲಕ್ಕೆ 108 ಬಾರಿ ಹನುಮಾನ್ ಚಾಲೀಸಾ (Hanuman Chalisa) ಪಠಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಲ್ಲ.. ನಾವು ಅಣ್ಣಮ್ಮ, ಮಾರಮ್ಮ, ಭೂತ ಪೂಜೆ ಮಾಡೋರು.. ಅಲ್ಲಿಗೆ ಹೋಗ್ತೀವಿ: ಬಿ.ಕೆ.ಹರಿಪ್ರಸಾದ್
Advertisement
Advertisement
ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸೇವಿಕಾ ಸಮಿತಿಯಿಂದ ಆಯೋಜಿಸಲಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಒಂದೇ ರೀತಿಯ ವೇಷಭೂಷಣ ಧರಿಸಿ, ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು, 108 ಬಾರಿ ಹನುಮಾನ್ ಚಾಲೀಸಾ ಮಂತ್ರಪಠಣ ಮಾಡಿದ್ದಾರೆ. ಈ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಶೋಯೆಬ್ ಮಲಿಕ್‌ರಿಂದ ವಿಚ್ಛೇದನ ಪಡೆದಿದ್ದಾರೆ – ಡಿವೋರ್ಸ್ ವದಂತಿಗೆ ತೆರೆಎಳೆದ ಸಾನಿಯಾ ಕುಟುಂಬ
Advertisement
ಯಾದಗಿರಿಯಲ್ಲಿ ಮಕ್ಕಳಿಗೆ ಶ್ರೀರಾಮನ ವೇಷ ತೊಡಿಸಿ ಸಂಭ್ರಮ: ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆ ಯಾದಗಿರಿಯಲ್ಲಿ ಪುಟ್ಟ ಮಕ್ಕಳು ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ವೇಷ ಧರಿಸಿ ಭಕ್ತಿಯಪರಕಾಷ್ಠೆ ಮೆರೆದಿದ್ದಾರೆ. ಪೋಷಕರು ಮಕ್ಕಳಿಗೆ ಶ್ರೀರಾಮ ಹಾಗೂ ಸೀತೆಯ ವೇಷಧಾರಿಗಳನ್ನಾಗಿ ಮಾಡಿ ಮಕ್ಕಳಲ್ಲಿ ಶ್ರೀರಾಮ ಹಾಗೂ ಸೀತಾಮಾತೆಯನ್ನು ಕಂಡು ಸಂತಸಗೊಂಡರು. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗಾಗಿ ಅರ್ಧದಿನ ರಜೆ ಘೋಷಿಸಿದ್ದ AIIMS – ಒಂದು ದಿನದ ನಂತ್ರ ಆದೇಶ ವಾಪಸ್!