ಯಾದಗಿರಿ: ಕಾಂಗ್ರೆಸ್ನಲ್ಲಿ (Congress) 50 ಮಂದಿ ಸಿಎಂ ಅಭ್ಯರ್ಥಿಗಳಿದ್ದಾರೆ. ಯಾರೂ ಸಿಎಂ ಆದರೂ ತಪ್ಪಿಲ್ಲ ಎಂದು ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ (Channareddy Patil Tunnur) ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ (Satish Jarakiholi) ಸಿಎಂ ಆದ್ರೆ ತಪ್ಪಿಲ್ಲ ಎನ್ನುವ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಶಾಸಕರು, 50 ಜನ ಸಿಎಂ ಆಗುವಂತ ಅಭ್ಯರ್ಥಿಗಳಿದ್ದಾರೆ, ಯಾರೂ ಸಿಎಂ ಆದ್ರೂ ತಪ್ಪಿಲ್ಲ. ಎಲ್ಲರಿಗೂ ಸಿಎಂ ಆಗುವ ಆಸೆ ಆಕಾಂಕ್ಷೆ ಇದ್ದೆ ಇರುತ್ತೆ. ಯಾರ್ಯಾರು ಪ್ರಯತ್ನ ಮಾಡ್ತಿದ್ದಾರೆ ಒಳಗೊಳಗೆ ಮಾಡ್ತಿರಬೇಕು. ಆದ್ರೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.
Advertisement
Advertisement
ಇನ್ನೂ ಸರ್ಕಾರ ಬದಲಾವಣೆ ಮಾಡುವ ಶಕ್ತಿ ನಮಗಿದೆ ಎನ್ನುವ ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿಕೆ ವಿಚಾರ ಕುರಿತು ಮಾತನಾಡಿ, ಅವರು ಜೋಶ್ನಲ್ಲಿ ಹೇಳಿರಬಹುದು. ಸಮಾಜ ಸಮಾಜಿಕವಾಗಿ ಅಭಿವೃದ್ಧಿಯಾಗುತ್ತಿದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂದು ಜಾರಿಕೊಂಡಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು!
Advertisement
Advertisement
20 ತಿಂಗಳಲ್ಲಿ ಸಚಿವರು ಬದಲಾವಣೆ ಆಗ್ತಾರೆ ಎನ್ನುವ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿದ ಶಾಸಕರು, ನನಗೆ ಅನ್ನಿಸಿದಂತೆ ವೈಯಕ್ತಿಕವಾಗಿ ಸಚಿವರ ಬದಲಾವಣೆ ಆಗುವುದಿಲ್ಲ. ಲೋಕಸಭೆ ಚುನಾವಣೆವರೆಗೂ ಬದಲಾವಣೆ ಇಲ್ಲ. ಆದ್ರೆ ಹೈಕಮಾಂಡ್ ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಅಂತಾ ಹೇಳಿದೆ. ಅದನ್ನು ನಾನೂ ಒಪ್ಪುತ್ತೇನೆ. ಆದ್ದರಿಂದ ಈ ಬಾರಿ ಹೊಸಬಹರಿಗೆ ಸಚಿವ ಸ್ಥಾನ ಸಿಗಬಹುದು. ಹೊಸಬರಿಗೆ ಅವಕಾಶ ಕೊಟ್ಟಷ್ಟೂ ಒಳ್ಳೆಯದಾಗುತ್ತದೆ. ಆದ್ರೇ ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 19 ಬಸ್ ಜೊತೆಗೆ ಲಕ್ಷ-ಲಕ್ಷ ಹಣವೂ ಬೆಂಕಿಗಾಹುತಿ ಆಯ್ತಾ? – ಪೊಲೀಸರು ಹೇಳಿದ್ದೇನು?
Web Stories