– ಚನ್ನಪಟ್ಟಣ ‘ದೋಸ್ತಿ’ ಅಭ್ಯರ್ಥಿ ಫೈನಲ್?
– ಕುಮಾರಸ್ವಾಮಿ ಮುಂದೆಯೇ ಜೆಡಿಎಸ್ ಕಾರ್ಯಕರ್ತರ ಒತ್ತಾಯ
ರಾಮನಗರ: ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರನ್ನು ಗೆಲ್ಲಿಸಿಕೊಂಡು ಬರೋಣ ಎಂದು ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತ ಜಯಮುತ್ತು ಹೇಳಿಕೆ ನೀಡಿರುವುದು ಚರ್ಚೆ ಹುಟ್ಟುಹಾಕಿದೆ. ಚನ್ನಪಟ್ಟಣ ‘ದೋಸ್ತಿ’ ಅಭ್ಯರ್ಥಿ ಫೈನಲ್ ಆಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
Advertisement
ಚನ್ನಪಟ್ಟಣ (Channapatna) ಚುನಾವಣಾ ಕಣ ರಂಗೇರಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ. ಸಂಜೆವರೆಗೂ ಐದು ಜಿಪಂ ವ್ಯಾಪ್ತಿಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸಲಾಗುತ್ತಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರ ಕೆಡವಲು 1,000 ಕೋಟಿ ರೆಡಿ ಮಾಡಿಕೊಂಡಿದ್ದಾರೆಂದು ಬಿಜೆಪಿ ನಾಯಕರೇ ಹೇಳಿದ್ದಾರೆ: ಶರಣ ಪ್ರಕಾಶ್ ಪಾಟೀಲ್
Advertisement
Advertisement
ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತ ಜಯಮುತ್ತು ಮಾತನಾಡಿ, ಚನ್ನಪಟ್ಟಣ ಉಪಚುನಾವಣೆ ಬರ್ತಿದೆ. ಇದು ಜೆಡಿಎಸ್‌ನ ಕ್ಷೇತ್ರ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ಬೈಎಲೆಕ್ಷನ್ ನಡೀತಿದೆ. ಹಾಗಾಗಿ ಈ ಕ್ಷೇತ್ರ ಉಳಿಸಿಕೊಳ್ಳಬೇಕಾದ ಅನಿವಾರ್ಯವಿದೆ. ಈ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿ ಮಾಡೋಣ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅದನ್ನ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಿ. ನಿಖಿಲ್ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿಕೊಂಡು ಬರೋಣ ಎಂದು ಹೇಳಿದರು.
Advertisement
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, 2019ರ ಲೋಕಸಭಾ ಚುನಾವಣೆಯ ಒಂದು ಕಹಿ ಘಟನೆ ಇತ್ತು. ಈ ಘಟನೆ ಮರೆಯಲು ಮತ್ತೊಮ್ಮೆ ಮಂಡ್ಯದಲ್ಲಿ ಜೆಡಿಎಸ್ ಬಾವುಟ ಹಾರಬೇಕು ಎಂಬ ಭಾವನೆ ಇತ್ತು. ಮಂಡ್ಯದ ಕಾರ್ಯಕರ್ತರು, ಮುಖಂಡರು ಕುಮಾರಣ್ಣ ಅವರ ಮೇಲೆ ಸಾಕಷ್ಟು ಒತ್ತಡ ಹೇರಿದ್ರು. ಹಾಗಾಗಿ ಕುಮಾರಣ್ಣ ಅವ್ರು ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯ ಬಂತು ಎಂದರು. ಇದನ್ನೂ ಓದಿ: ರಾಜ್ಯದ 47.12 ಲಕ್ಷ ರೈತರ ಖಾತೆಗೆ 942 ಕೋಟಿ ಜಮೆ; ಪಿಎಂ ಕಿಸಾನ್ ಯೋಜನೆ ರೈತರ ಸಂಜೀವಿನಿ ಎಂದ ಜೋಶಿ
ಮಂಡ್ಯದಲ್ಲಿ ಗೆದ್ದ ಬಳಿಕ ಕುಮಾರಣ್ಣ ಮೋದಿಯವರ ಸಂಪುಟದಲ್ಲಿ ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ ಕೇಂದ್ರ ಕೈಗಾರಿಕಾ ಸಚಿವರಾಗಿದ್ದಾರೆ. ಸಾಕಷ್ಟು ಯುವಜನತೆ ವಿದ್ಯಾವಂತರಿದ್ದಾರೆ. ಅವರಿಗೆ ಸಮರ್ಪಕ ಉದ್ಯೋಗಾವಕಾಶಗಳಿಲ್ಲ. ಇದೆಲ್ಲವನ್ನೂ ಕುಮಾರಸ್ವಾಮಿ ಅವರು ಮನಸ್ಸಿಗೆ ತೆಗೆದುಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಮಂಡ್ಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿದ್ದಾರೆ. ಹಲವಾರು ಕೈಗಾರಿಕೆಗಳ ಸ್ಥಾಪನೆಗೆ ಕೆಲಸ ಮಾಡ್ತಿದ್ದಾರೆ. ಚನ್ನಪಟ್ಟಣದಲ್ಲಿ ದೇವೇಗೌಡರು ಇಗ್ಗಲೂರು ಡ್ಯಾಂ ನಿರ್ಮಾಣ ಮಾಡಿದ್ದಾರೆ. ಇದು ತಾಲೂಕನ ರೈತಾಪಿ ವರ್ಗಕ್ಕೆ ದೇವೇಗೌಡರು ನೀಡಿರುವ ಕೊಡುಗೆ. ಇದನ್ನ ಜನ ಪ್ರತಿದಿನ ನೆನಪು ಮಾಡಿಕೊಳ್ತಾರೆ ಎಂದು ತಿಳಿಸಿದರು.
ಕುಮಾರಣ್ಣ ರಾಜ್ಯದಲ್ಲಿ ಎರಡನೇ ಬಾರಿಗೆ ಸಿಎಂ ಆಗಲು ಚನ್ನಪಟ್ಟಣದ ಜನತೆ ಕಾರಣ. ಚನ್ನಪಟ್ಟಣ ತಾಲೂಕಿಗೆ ಒಂದೂವರೆ ಸಾವಿರ ಕೋಟಿ ಅನುದಾನ ತಂದಿದ್ರು. ಇದನ್ನ ಯಾರೂ ತಿರುಚಲು ಸಾಧ್ಯವಿಲ್ಲ. ರಾಜ್ಯದ ಉಪಮುಖ್ಯಮಂತ್ರಿಗಳಿಗೆ ಚನ್ನಪಟ್ಟಣ ತಾಲೂಕು ಗೊತ್ತಿರಲಿಲ್ಲ. ಈಗ ಉಪಚುನಾವಣೆ ಇರೋದ್ರಿಂದ ಚನ್ನಪಟ್ಟಣಕ್ಕೆ ನಿರಂತರ ಪ್ರವಾಸ ಮಾಡ್ತಿದ್ದಾರೆ. ಏನೋ ಅನುದಾನ ತಂದಿದ್ದೀವಿ ಅಂತ ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿಸ್ತಿದ್ದಾರೆ. ಕುಮಾರಸ್ವಾಮಿ ಅವರು ತಾವು ತಂದ 1,500 ಕೋಟಿ ಅನುದಾನದ ಬಗ್ಗೆ ಜಾಹೀರಾತು ಕೊಟ್ಟಿರಲಿಲ್ಲ. ಪಾಪ ಈಗ ಉಪಮುಖ್ಯಮಂತ್ರಿಗಳಿಗೆ ಚನ್ನಪಟ್ಟಣದ ಮೇಲೆ ಮಮಕಾರ ಬಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅನ್ನೋದಾದ್ರೆ ಹೋಗಲಿ: ಹರಿಪ್ರಸಾದ್ ಸ್ಫೋಟಕ ಹೇಳಿಕೆ
ಐದು ಗ್ಯಾರಂಟಿ, ಐದು ಗ್ಯಾರಂಟಿ ಅಂತ ಚರ್ಚೆ ಮಾಡ್ತಿದ್ದಾರೆ. ಅದನ್ನ ಸಮರ್ಪಕವಾಗಿ ಕೊಡ್ತಿದ್ದಾರಾ? ಗ್ಯಾರಂಟಿ ಹೆಸರಲ್ಲಿ ಸರ್ಕಾರ ಹಗಲು ದರೋಡೆ ಮಾಡ್ತಿದೆ. ರಾಜ್ಯದ ಜನತೆ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಕೇವಲ ಒಂದೂವರೆ ವರ್ಷದಲ್ಲಿ ಸರ್ಕಾರ ನಡವಳಿಕೆ ಗೊತ್ತಾಗ್ತಿದೆ. ಪರಿಶಿಷ್ಟ ಜಾತಿ, ಪಂಗಡದ 187 ಕೋಟಿ ಹಣವನ್ನ ಬೇರೆ ರಾಜ್ಯದ ಚುನಾವಣೆಗೆ ಬಳಸಿಕೊಂಡಿದೆ. ಸ್ವತಃ ಸಿಎಂ ಅವರೇ ಇದನ್ನ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಇದರ ಮಧ್ಯೆ ಪಾಪ ಡಿಸಿಎಂಗೆ ಚನ್ನಪಟ್ಟಣ ನೆನಪಿಗೆ ಬಂದಿದೆ. ಚನ್ನಪಟ್ಟಣ ತಾಲೂಕಿಗೆ ಕಾಂಗ್ರೆಸ್ ಕೊಡುಗೆ ಏನು? ಇದನ್ನ ನೀವು ಪ್ರಶ್ನೆ ಮಾಡಬೇಕು. ಕೇವಲ ಚುನಾವಣೆಗೋಸ್ಕರ ಮಾಡ್ತಿರೋ ದೊಂಬರಾಟ ಇದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.