ಬೆಂಗಳೂರು: ಜಾತಿ ಗಣತಿ (Caste Census) ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಇದೆ. ಅದನ್ನ ಜಾರಿಗೊಳಿಸಲು ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ? ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅನ್ನೋದಾದ್ರೆ ಹೋಗಲಿ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad ಸ್ಫೋಟಕ ಹೇಳಿಕೆ ನೀಡಿದ್ದಾರೆ.
Advertisement
ನಗದರಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ (Congress Manifesto) ಇದೆ. ಆದ್ರೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ? ಮೊದಲು ಜಾತಿ ಗಣತಿ ಜಾರಿಮಾಡಲಿ. ಇದರಿಂದ ಎಲ್ಲ ಸಮುದಾಯಕ್ಕೂ ಅನಕೂಲ ಇದೆ. ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಅವರೇನು ಮಾಡಿದ್ದಾರೆ, ನಾನೇನು ಮಾಡಿದ್ದೀನಿ ಅಂತಾ ಚರ್ಚೆ ಆಗಲಿ: ಸಿಎಂಗೆ ಹೆಚ್‌ಡಿಕೆ ಓಪನ್ ಚಾಲೆಂಜ್
Advertisement
Advertisement
ರಾಹುಲ್ ಗಾಂಧಿ, ಪಕ್ಷದ ಪ್ರಣಾಳಿಕೆ ಬಗ್ಗೆ ಗೌರವ ಇರುವವರು ಇದಕ್ಕೆ ಬೆಂಬಲ ಕೋಡಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಯಲ್ಲಿ ಜಾತಿಗಣತಿ ಜಾರಿ ಬಗ್ಗೆ ಹೇಳಿದ್ದಾರೆ. ಪ್ರಪಂಚ ಬಿದ್ರೂ ಜಾತಿಗಣತಿ ಜಾರಿಯಾಗಬೇಕು ಅಂತ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಹುಲ್ ಗಾಂಧಿ (Rahul Gandhi) ಸಹ ಹೇಳಿದ್ದಾರೆ. ಹಾಗಾಗಿ, ಪ್ರಪಂಚ ತಲೆ ಕೆಳಗಾಗಲಿ, ಜಾತಿ ಜನಗಣತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಸರ್ಕಾರ ಬಿದ್ರೆ ಬಿಳಲಿ ಯಾಕೆ ಹೆದರಬೇಕು? ಸರ್ಕಾರಕ್ಕೆ ಕಂಟಕ ಎದುರಾದ್ರೆ ಆಗಲಿ, ಜಾತಿ ಜನಗಣತಿ ತರಬೇಕು. ನಮ್ಮ ಸರ್ಕಾರ ಬಂದಿರೋದು ಅಧಿಕಾರ ಅನುಭವಿಸುವುದಕ್ಕಲ್ಲ. ಕಾಂಗ್ರೆಸ್ ಪ್ರಣಾಳಿಕೆ ಮೇಲೆ ನಂಬಿಕೆ ಇರುವವರು ಜಾತಿ ಜನಗಣತಿ ಬೆಂಬಲಿಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಬರಿಮಲೆ ಯಾತ್ರೆಗೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ – ದಿನಕ್ಕೆ 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ