ರಾಮನಗರ: ಚನ್ನಪಟ್ಟಣ ಉಪಚುನಾವಣಾ (Channapatna By Election) ಕಣ ರಂಗೇರಿದೆ. ಮೈತ್ರಿ ಅಭ್ಯರ್ಥಿ ಗೊಂದಲ ಮುಂದುವರಿದಿದೆ. ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆಯ ಸುಳಿವು ನೀಡಿದ್ದ ಸಿ.ಪಿ.ಯೋಗೇಶ್ವರ್ (CP Yogeshwar) ಇದೀಗ ಕೊನೆ ಕ್ಷಣದಲ್ಲಿ ಕಾದುನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.
ಬುಧವಾರ ಬೆಂಬಲಿಗರ ಸಭೆ ನಡೆಸಿದ ಸಿಪಿ ಯೋಗೇಶ್ವರ್, ನನಗೆ ಹೈಕಮಾಂಡ್ ನಾಯಕರು ಮಾತುಕೊಟ್ಟಿದ್ದಾರೆ ನೂರಕ್ಕೆ ನೂರರಷ್ಟು ಟಿಕೆಟ್ ನನಗೇ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ 500 ಕೋಟಿ ಪಾವತಿಸಿಲ್ಲ : ಈಶ್ವರ್ ಖಂಡ್ರೆ
ನನಗೆ ಟಿಕೆಟ್ ಕೈತಪ್ಪುವುದು ಹೊಸದಲ್ಲ.ಆದರೆ ಈ ಚುನಾವಣೆಯನ್ನ ಡಿಕೆ ಶಿವಕುಮಾರ್ (DK Shivakumar) ಗಂಭೀರವಾಗಿ ತೆಗೆದುಕೊಂಡಿಲ್ಲ. ಕುಮಾರಸ್ವಾಮಿ (HD Kumaraswamy) ಕೂಡಾ ಬಂದು ಇಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ಹಾಗಾಗಿ ಯಾರಿಗೂ ಆತಂಕ ಬೇಡ ನನಗೆ ಟಿಕೆಟ್ ಸಿಗುತ್ತದೆ. ನನಗೆ ಆಶೀರ್ವಾದ ಮಾಡಿ ಎಂದು ಸಿಪಿ ಯೋಗೇಶ್ವರ್ ಕೋರಿದ್ದಾರೆ.
ಜೆಡಿಎಸ್ ಕ್ಷೇತ್ರ:
ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ಆದರೆ ನ್ಯಾಚುರಲ್ ಆಗಿ ಅದು ಜೆಡಿಎಸ್ ಕ್ಷೇತ್ರ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಶೋಕ್ (Ashok) ಹೇಳಿದ್ದಾರೆ. ಈ ಮೂಲಕ ಟಿಕೆಟ್ ಜೆಡಿಎಸ್ ಪಾಲಾಗುವ ಸುಳಿವು ನೀಡಿದ್ದಾರೆ.
ಬಿಜೆಪಿಯವರು ಯಾವುದೇ ಪ್ರಯತ್ನ ಮಾಡಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಜೆಡಿಎಸ್ ಕ್ಷೇತ್ರ ಇರುವ ಕಾರಣ ಅಭ್ಯರ್ಥಿ ಆಯ್ಕೆ ಬಗ್ಗೆ ಕುಮಾರಸ್ವಾಮಿಯವರೇ ನಿರ್ಧಾರ ಮಾಡುತ್ತಾರೆ ಎಂದರು.