ರಾಮನಗರ: ಚನ್ನಪಟ್ಟಣ ಹೈವೋಲ್ಟೇಜ್ ಅಖಾಡ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಅಭ್ಯರ್ಥಿ ವಿಚಾರದಲ್ಲಿ ದೋಸ್ತಿಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡುತ್ತಿದೆ.
ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರದ್ದು ಒಂದು ಮಾತಾದ್ರೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರದ್ದು ಇನ್ನೊಂದು ಮಾತು. ಇಬ್ಬರ ಮಾತಿಗೂ ಸಾಮತ್ಯೆ ಇಲ್ಲ ಒಂದಕ್ಕೊಂದು ತಾಳಮೇಳ, ಹೊಂದಾಣಿಕೆಯೂ ಇಲ್ಲ. ಮೈತ್ರಿಕೂಟದಿಂದ ಚನ್ನಪಟ್ಟಣ ಅಭ್ಯರ್ಥಿ ಆಗಲು ಸಿ.ಪಿ.ಯೋಗೇಶ್ವರ್ ಕಸರತ್ತು ನಡೆಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಹೆಗಲ ಮೇಲೆ ಕೋವಿ ಇಟ್ಟು ಸಿ.ಪಿ ಯೋಗೇಶ್ವರ್ (CP Yogeshwar) ದಾಳ ಉರುಳಿಸಿದ್ದಾರೆ. ತಮ್ಮನ್ನೇ ಅಭ್ಯರ್ಥಿ ಆಗುವಂತೆ ಕುಮಾರಸ್ವಾಮಿ ಹೇಳಿದ್ದಾರೆ ಅಂತ ಸಿ.ಪಿ ಯೋಗೇಶ್ವರ್ ದಾಳ ಉರುಳಿಸಿದ್ರು. ಆದರೆ ಸಿಪಿವೈ ಹೇಳಿಕೆಗೆ ಹೆಚ್‍ಡಿಕೆ ಅಚ್ಚರಿ ಅಭ್ಯರ್ಥಿ ಹಾಕುವ ಪ್ರತಿ ದಾಳ ಪ್ರಯೋಗಿಸಿದರು. ಈ ಮೂಲಕ ಚನ್ನಪಟ್ಟಣ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗೆ ಅಲ್ಲ ಅನ್ನೋ ಪರೋಕ್ಷ ಸಂದೇಶ ರವಾನೆ ಮಾಡಿದ್ರು. ಇದನ್ನೂ ಓದಿ; ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಕಾರ್ಯಕರ್ತರು ಹಾಗೂ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿ ನಿರ್ಣಯ ಮಾಡ್ತೀವಿ ಕುಮಾರಸ್ವಾಮಿ (HD Kumarasway) ಎಂದು ಹೇಳಿದ್ದಾರೆ. ಅಭ್ಯರ್ಥಿ ಯಾರೆಂಬ ಬಗ್ಗೆ ಸುಳಿವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಈ ಮೂಲಕ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆ ಜಟಿಲ ಸ್ವರೂಪ ಪಡ್ಕೊಳ್ತಿದೆ. ಇದರಿಂದ ಚನ್ನಟ್ಟಣದಲ್ಲಿ ಮೈತ್ರಿ ಧರ್ಮ ಪಾಲನೆ ಆಗುತ್ತಾ..? ಅನ್ನುವ ಅನುಮಾನ ಸೃಷ್ಟಿಯಾಗಿದೆ. ಹೆಚ್‍ಡಿಕೆ ಕ್ಷೇತ್ರ ಉಳಿಸಿಕೊಳ್ಳುವ ಕಸರತ್ತು ನಡೆಸ್ತಿದ್ದಾರೆ ಅನ್ನೋ ಅನುಮಾನ ಬಿಜೆಪಿಗೆ ಮೂಡಿದೆ. ಹೀಗಾಗಿ ಚನ್ನಪಟ್ಟಣ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯ್ತಿದೆ.