ಬೆಂಗಳೂರು: ಚನ್ನಪಟ್ಟಣ ಉಪಕದನ ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ (CP Yogeshwar) ರಾಜೀನಾಮೆ ನಡೆ ಬೆನ್ನಲ್ಲೇ ಕಾಂಗ್ರೆಸ್ (Congress) ಹೈ ಅಲರ್ಟ್ ಆಗಿದ್ದು ತೆರೆಮರೆ ಮಾತುಕತೆ ಪ್ರಯತ್ನ ನಡೆಸುತ್ತಿದೆ.
ಹೌದು. ಒಂದು ವೇಳೆ ಯೋಗೇಶ್ವರ್ ಗ್ರೀನ್ ಸಿಗ್ನಲ್ ನೀಡಿದರೆ ನಾಳೆಯೇ ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳಲು ಸಿದ್ದತೆ ನಡೆದಿದೆ. ಇದನ್ನೂ ಓದಿ: ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ | ಕಾಯ್ದೆ ತಿದ್ದುಪಡಿ ಮಾಡಿ ಕಠಿಣ ಕ್ರಮಕ್ಕೆ ಚಿಂತನೆ : ರಾಮ್ ಮೋಹನ್ ನಾಯ್ಡು
ಏನು ಬೇಕಾದರೂ ಆಗಬಹುದು ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮಕ್ಕೆ ಏನೇನು ಸಿದ್ಧತೆ ಮಾಡಬೇಕೋ ಎಲ್ಲವನ್ನೂ ಸಿದ್ದಪಡಿಸಿ ಕೊಳ್ಳಿ ಎಂದು ಕೆಪಿಸಿಸಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೂಚನೆ ನೀಡಿದ್ದಾರೆ.
- Advertisement
- Advertisement
ಯಾರ ಸೇರ್ಪಡೆ ಎಂಬ ಗುಟ್ಟು ಬಿಟ್ಟು ಕೊಡದ ಡಿಸಿಎಂ ಬಹುತೇಕ ನಾಳೆ ಒಂದು ಪ್ರಮುಖವಾದ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಬಹುದು ಸಿದ್ದವಿರಿ ಎಂಬ ಸಂದೇಶ ರವಾನಿಸಿದ್ದಾರೆ.
ಯೋಗೇಶ್ವರ್ ಬಿಜೆಪಿಯಿಂದ (BJP) ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಚನ್ನಪಟ್ಟಣ ತನ್ನ ಕ್ಷೇತ್ರವಾಗಿರುವ ಕಾರಣ ಜೆಡಿಎಸ್ ಅಭ್ಯರ್ಥಿಯನ್ನು ಹಾಕಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಕೊನೆಯವರೆಗೂ ಯೋಗೇಶ್ವರ್ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಯಡಿಯೂರಪ್ಪ ಮೈತ್ರಿ ಧರ್ಮ ಪಾಲನೆ ಮಾಡಬೇಕೆಂದು ಹೇಳಿದ ಬೆನ್ನಲ್ಲೇ ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.
ಯೋಗೇಶ್ವರ್ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗುತ್ತಿರುವ ವಿಚಾರ ಅಧಿಕೃತವಾಗುತ್ತಿದ್ದಂತೆ ಕೊನೆ ಕ್ಷಣದಲ್ಲಿ ಅವರನ್ನು ಸೆಳೆಯಲು ಡಿಕೆ ಬ್ರದರ್ಸ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.