ನವದೆಹಲಿ: ಚನ್ನಪಟ್ಟಣ ಉಪಚುನಾವಣೆ (Channapatna By Election) ಸಂಬಂಧ ದೋಸ್ತಿಗಳ ಟಿಕೆಟ್ ಫೈಟ್ ಜೋರಾಗಿದೆ. ಬಿಜೆಪಿ (BJP) ರಾಜ್ಯ ನಾಯಕರು ಯೋಗೇಶ್ವರ್ (CP Yogeshwar) ಪರ ಲಾಬಿ ಮಾಡಿದ್ದರೆ ಜೆಡಿಎಸ್ (JDS) ತನ್ನ ಕೋಟೆ ಉಳಿಸಿಕೊಳ್ಳಲು ಹೆಚ್‌ಡಿಕೆ (HD Kumaraswamy) ಕಸರತ್ತು ನಡೆಸಿದ್ದಾರೆ.
ಗುರುವಾರ ರಾತ್ರಿ ಪ್ರಹ್ಲಾದ್ ಜೋಷಿ (Pralhad Joshi) ನಿವಾಸದಲ್ಲಿ ನಡೆದ ಸಭೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ, ಪ್ರತಿ ಪಕ್ಷದ ನಾಯಕ ಆರ್ ಅಶೋಕ್, ಕೇಂದ್ರ ಸಚಿವ ಸೋಮಣ್ಣ, ಸಂಸದ ಬೊಮ್ಮಾಯಿ, ಅಶ್ವತ್ಥ ನಾರಾಯಣ್, ಅರವಿಂದ್ ಬೆಲ್ಲದ್, ಪರಿಷತ್ ಸದಸ್ಯ ಸಿಟಿ ರವಿ ಭಾಗಿಯಾಗಿದ್ದರು. ಇದನ್ನೂ ಓದಿ: ಆರ್ಥಿಕ ಮುಗ್ಗಟ್ಟು – 150 ಸಿಬ್ಬಂದಿಗೆ ಮೂರು ತಿಂಗಳ ಕಾಲ ರಜೆ ನೀಡಿದ ಸ್ಪೈಸ್ ಜೆಟ್
Advertisement
Advertisement
ಸಭೆ ಬಳಿಕ ಆರ್ ಅಶೋಕ್ ಮಾತನಾಡಿ, ಬಿಜೆಪಿ- ಜೆಡಿಎಸ್ ಒಟ್ಟಿಗೆ ಹೋದರೆ ಇಬ್ಬರಿಗೂ ಲಾಭ. ಉಪ ಚುನಾವಣೆಯಲ್ಲೂ ಕೂಡ ಒಟ್ಟಿಗೆ ಹೋಗುವ ಬಗ್ಗೆ ಚರ್ಚೆ ನಡೆದಿದೆ. ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಗೆಲ್ಲಬೇಕೆಂಬ ಒಂದೇ ಉದ್ದೇಶದಿಂದ ಮೈತ್ರಿ ಪಕ್ಷ ಒಟ್ಟಿಗೆ ಹೋಗಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. ಸೌಹಾರ್ದಯುತವಾಗಿ ಸಭೆ ನಡೆದಿದೆ ಎಂದು ತಿಳಿಸಿದರು.
Advertisement
ಮೂಲಗಳ ಪ್ರಕಾರ ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದು ಅಂತಿಮವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಎಂಟ್ರಿ ಬಳಿಕವೇ ಟಿಕೆಟ್ ಗೊಂದಲ ಪರಿಹಾರವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್
Advertisement
ದೋಸ್ತಿಗಳ ಮಧ್ಯೆ 3 ಒಪ್ಪಿತ ಸೂತ್ರ
1. ಹೆಚ್‌ಡಿಕೆ ಮನವೊಲಿಸಿ ಸಿಪಿ ಯೋಗೇಶ್ವರ್‌ಗೆ ಟಿಕೆಟ್ ಕೊಡಿಸುವುದು
2. ಜೆಡಿಎಸ್ ಚಿನ್ಹೆಯಿಂದಲೇ ಸಿಪಿವೈ ಸ್ಪರ್ಧೆಗೆ ಒಪ್ಪಿಕೊಳ್ಳುವುದು
3. ದೋಸ್ತಿಗಳಿಂದ ಒಪ್ಪಿತ 3ನೇ ವ್ಯಕ್ತಿಯನ್ನ ಅಭ್ಯರ್ಥಿ ಮಾಡುವುದು