ಕೊಪ್ಪಳ: ನಗರದಲ್ಲಿ ಬೀದಿ ಕಾಮಣ್ಣರ ಕಾಟಕ್ಕೆ ಅದೆಷ್ಟೂ ಯುವತಿಯರು ಕಾಲೇಜು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟಿದ್ದರು. ಬೀದಿ ಕಾಮಣ್ಣರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ನಗರದಲ್ಲಿ ವಿಶೇಷ ಪಡೆ ರಚನೆಯಾಗಿದ್ದು, ಯುವತಿಯರು ನಿರ್ಭೀತಿಯಿಂದ ಓಡಾಡುವಂತೆ ಆಗಿದೆ.
ಯುವತಿಯರು ಮತ್ತು ಮಹಿಳೆಯರಿಗೆ ಬೀದಿ ಕಾಮಣ್ಣರ ಕಾಟ ತಪ್ಪಿಸಲು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ‘ಚೆನ್ನಮ್ಮ ಪಡೆ’ ರಚಿಸಿದ್ದಾರೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‘ಚೆನ್ನಮ್ಮ ಪಡೆ’ ಕಾರ್ಯನಿರ್ವಹಿಸುತ್ತಿದೆ. ಚನ್ನಮ್ಮಪಡೆಯ ಟೀಂನಲ್ಲಿ ಐದು ಜನ ಸಿಬ್ಬಂದಿ ಇದ್ದು, ಇವರ ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಇರುತ್ತಾರೆ. ಅಧಿಕಾರಿಗಳು ಕೆಲವೊಂದು ಬಾರಿ ಪೊಲೀಸ್ ಸಮವಸ್ತ್ರದಲ್ಲಿದ್ದರೆ, ಬಹತೇಕ ಬಾರಿ ಮಫ್ತಿಯಲ್ಲಿ ಓಡಾಡುತ್ತಿರುತ್ತಾರೆ.
Advertisement
Advertisement
ಯುವತಯರಿಗೆ ಯಾರಾದರೂ ಕಿರುಕುಳ ನೀಡುತ್ತಿದ್ದನ್ನು ಗಮನಿಸಿದ್ರೆ ಕೂಡಲೇ ಪುಂಡರನ್ನು ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಇಷ್ಟು ದಿನ ಕಾಮುಕರ ಭಯದಿಂದ ಓಡಾಡುತ್ತಿದ್ದ ಕೊಪ್ಪಳ ಜಿಲ್ಲೆಯ ಯುವತಿಯರು-ಮಹಿಳೆಯರಿಗೆ ಚನ್ನಮ್ಮ ಪಡೆಯಿಂದ ಸದ್ಯ ನಿರ್ಭಿತಿಯಿಂದ ಓಡಾಡುವಂತಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv