-ಸಿಎಂ ಬರೆದ ಪತ್ರಕ್ಕೆ ಕೇಂದ್ರದಿಂದ ಯಾವುದೇ ಲಿಖಿತ ಪ್ರತಿಕ್ರಿಯೆ ಬಂದಿಲ್ಲ
ಬೆಂಗಳೂರು: ಚನ್ನಗಿರಿ (Channagiri) ಲಾಕಪ್ ಡೆತ್ ಪ್ರಕರಣದಲ್ಲಿ ಯಾರದೇ ತಪ್ಪಿದ್ದರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದೇವೆ. ಯಾರ ವೈಫಲ್ಯ ಇದ್ದರೂ ಕ್ರಮ ಕೈಗೊಳ್ತೀವಿ. ಪೊಲೀಸರು ತಿಂಗಳು ವಸೂಲಿ ಮಾಡಿರೋದು ಕಂಡು ಬಂದರೆ ಸೇವೆಯಿಂದಲೇ ವಜಾ ಮಾಡುತ್ತೇವೆ. ಅಂತಹ ಅಧಿಕಾರಿಗಳು ಅಧಿಕಾರದಲ್ಲಿ ಇರಬಾರದು. ಘಟನೆ ಸಂಬಂಧ ಈಗಾಗಲೇ ಮೂವರು ಪೊಲೀಸ್ ಅಧಿಕಾರಿಗಳ ಅಮಾನತ್ತಾಗಿದೆ. ಪೊಲೀಸರಿಗೆ ಕಮಿಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಘಟನೆ ಆಗಿದೆ ಎಂಬ ಸ್ಥಳೀಯರ ಆರೋಪದ ವಿಚಾರ ತನಿಖೆ ಮಾಡಿದಾಗ ಗೊತ್ತಾಗಬೇಕು. ತನಿಖೆಯಲ್ಲಿ ಬೆಳಕಿಗೆ ಬಂದರೆ ಅವರನ್ನ ವಜಾ ಮಾಡುವವರೆಗೂ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.
Advertisement
Advertisement
ಪೊಲೀಸ್ ಠಾಣೆ ಮೇಲೆ ದಾಳಿ ವಿಚಾರದಲ್ಲಿ ನಾನು ಶನಿವಾರ ಸಹ ಪ್ರತಿಕ್ರಿಯಿಸಿದ್ದೇನೆ. ಈಗ ಶಾಸಕರೇ ಹೋಗಿ ಪೊಲೀಸ್ ಠಾಣೆ ಒಳಗೆ ಹೋಗಿ ಗಲಾಟೆ ಮಾಡ್ತಾರೆ. ಪೊಲೀಸರ ಮೇಲೆ ದಾಂಧಲೆ ಮಾಡ್ತಾರೆ. ಈ ರೀತಿ ಆಗೋದಾದ್ರೆ ಸಮಾಜದಲ್ಲಿ ಶಾಂತಿ ಹೇಗಿರುತ್ತೆ? ಅದಕ್ಕೆ ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು. ಹಾಗೆ ತೆಗೆದು ಕೊಂಡವರ ಮೇಲೆ ಕ್ರಮ ತೆಗೆದುಕೊಳ್ತೇವೆ. ಅವರು ಶಾಸಕರೇ ಆಗಿರಲಿ ಸಂಸದರೇ ಆಗಿರಲಿ. ಯಾರನ್ನೂ ಕೂಡ ಬಿಡೋದಿಲ್ಲ. ಗೂಂಡಾಗಿರಿ ಮಾಡಿ ಬಚಾವ್ ಆಗ್ತೀನಿ ಎಂದರೆ ಸರಿಯಲ್ಲ. ಯಾರೇ ತಪ್ಪು ಮಾಡಿದ್ರೂ ಕ್ರಮ ಆಗುತ್ತೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Advertisement
ಕರ್ನಾಟಕ ಬಿಹಾರ ಆಗ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ, ಅವರ ಪಕ್ಷ ಆಡಳಿತದಲ್ಲಿರುವ ರಾಜ್ಯಗಳು ಹೇಗಿವೆ? ಗುಜರಾತ್ ರಾಜ್‍ಕೋಟ್‍ನಲ್ಲಿರುವ ಗೇಮಿಂಗ್ ಝೋನ್‍ನಲ್ಲಿ ನಡೆದ ಬೆಂಕಿ ದುರಂತದಲ್ಲಿ 27 ಜನರ ಸಾವಿಗೆ ಯಾರು ಹೊಣೆ, ಹಾಗಾದ್ರೆ ಅಲ್ಲಿನ ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ನಾವು ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹಾಳಾಗಲು ಬಿಡಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದ (Prajwal Revanna Pendrive Case) ವಿಚಾರವಾಗಿ, ಸಿಎಂ ಸಿದ್ದರಾಮಯ್ಯ (Siddaramaiah) ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಯಾವುದೇ ಲಿಖಿತ ಪ್ರತಿಕ್ರಿಯೆ ಬಂದಿಲ್ಲ. ಸಿಎಂ ಪತ್ರದ ಬಗ್ಗೆ ವಿದೇಶಾಂಗ ಸಚಿವರ ಹೇಳಿಕೆ ನೀಡಿದ್ದಾರೆ. ನಮಗೆ ಯಾವುದೇ ಪತ್ರ ಆಗಲಿ ಬಂದಿಲ್ಲ. ಮಾಧ್ಯಮಗಳಲ್ಲಿ ನೋಡುತ್ತಾ ಇದ್ದೇನೆ ಅಷ್ಟೇ, ಲಿಖಿತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಿಎಂ ಮೇ 1 ರಂದು ಪ್ರಧಾನಿಗೆ ಮೊದಲ ಪತ್ರ ಬರೆದಿದ್ದರು. ಮೇ 21 ರಂದು ಎರಡನೇ ಪತ್ರ ಬರೆದಿದ್ದರು. ಆ ಪತ್ರ ಎಲ್ಲಿ ಹೋಯ್ತು? ಪ್ರಧಾನಿ ಮಂತ್ರಿಗಳ ಕಚೇರಿಗೆ ಸಿಎಂ ಪತ್ರ ಹೋದರೆ ಅದಕ್ಕೆ ಗೌರವ ಸಿಗಬೇಕಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ.
ವಿದೇಶಾಂಗ ಸಚಿವರು ಮೇ 21 ರಂದು ಪತ್ರ ಬಂದಿದೆ ಅಂತಾರೆ. ಕ್ರಮ ತೆಗೆದುಕೊಳ್ತಾ ಇರುವುದು ಒಳ್ಳೆಯದು. ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಸಿಎಂ ಹಾಗೂ ಗೃಹ ಸಚಿವರು ಹಾಸನ ಸಂತ್ರಸ್ತರನ್ನ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂದು ಪ್ರಗತಿಪರ ಸಾಹಿತಿಗಳ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಅವರಿಗೆ ಎಲ್ಲಾ ರೀತಿ ಭದ್ರತೆ ಕೊಡುತ್ತೇವೆ ಎಂದು ಹೇಳಿದ್ದೇವೆ. ನಾನು ಹಾಗೂ ಸಿಎಂ ಇರುವಾಗಲೇ ಹೇಳಿದ್ದೇವೆ. ಸಂತ್ರಸ್ತೆಯರನ್ನು ಯಾರು ಒತ್ತಾಯ ಮಾಡಿ ಬೇರೆ ಬೇರೆ ರೀತಿಯಲ್ಲಿ ನಡೆಸಿಕೊಳ್ಳುವುದಿಲ್ಲ. ಹಾಸನ ಜಿಲ್ಲೆ ಎಸ್ಪಿ, ಐಜಿಗೆ ತಿಳಿಸಿದ್ದೇವೆ. ಯಾರಿಗೂ ಕೂಡ ತೊಂದರೆ ಆಗಬಾರದೆಂದು ಸೂಚನೆ ಕೊಟ್ಟಿದ್ದೇವೆ ಎಂದಿದ್ದಾರೆ.
ಕುಮಾರಸ್ವಾಮಿಯವರ ಆರೋಪದ ವಿಚಾರವಾಗಿ, ನಾವು ಅದನ್ನೇ ತನಿಖೆ ಮಾಡ್ತಾ ಇದ್ದೇವೆ. ಪ್ರಜ್ವಲ್ ಅವರ ಪಾತ್ರ ಏನಿದೆ ಎಂದು ತನಿಖೆ ಮಾಡಬೇಕೆಂದೆ ಮಾಡ್ತಿರೋದು. ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ. ಯಾರಾದೋ ಹೆಸರು ಹೇಳೊದು ಅಲ್ಲ. ತನಿಖೆ ಅದ ಮೇಲೆ ನಿಖರವಾಗಿ ಹೇಳಬಹದು. ತನಿಖೆಗೆ ಮೊದಲೇ ಹೆಸರು ಹೇಳೊದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.