ಕಡಲೆ ಬೇಳೆಯಲ್ಲಿ ಮಾಡುವ ಸಿಹಿ ತಿನಿಸು ಎಂದರೆ ನಮಗೆ ಥಟ್ ಎಂದು ನೆನಪಾಗುವುದು ಒಬ್ಬಟ್ಟು. ಆದರೆ ಇಂದು ನಾವು ಹೇಳಿಕೊಡುವ ರೆಸಿಪಿ ಸುಕ್ಕಿನುಂಡೆ. ಸುಕ್ಕಿನುಂಡೆ ಸಾಂಪ್ರದಾಯಿಕ ತಿನಿಸಾಗಿದ್ದು, ಯಾವುದೇ ಬೇಳೆಯನ್ನು ಬಳಸಿ ಈ ರೆಸಿಪಿಯನ್ನು ಮಾಡಬಹುದು. ಇಂದು ನಾವು ಕಡಲೆ ಬೇಳೆ ಬಳಸಿ ಸುಕ್ಕಿನುಂಡೆ ಹೇಗೆ ತಯಾರಿಸುವುದು ಎಂದು ಹೇಳಿಕೊಡುತ್ತೇವೆ. ಇದು ಆರೋಗ್ಯಕರವಾದ ಅಡುಗೆ ಕೂಡ ಆಗಿದೆ. ಒಳಗಡೆ ಹೋಳಿಗೆಯ ರುಚಿ ಇದ್ದು, ತಿನ್ನಲು ಸಖತ್ ಆಗಿ ಇರುತ್ತೆ. ಮತ್ತೆ ಇನ್ಯಾಕೆ ತಡ. ಈ ಶುಭ ಶನಿವಾರ ಕಡಲೆಬೇಳೆಯ ಸುಕ್ಕಿನುಂಡೆ ಮಾಡೋಣ.
Advertisement
ಬೇಕಾಗುವ ಸಾಮಾಗ್ರಿಗಳು:
* 3 ಗಂಟೆ ನೆನೆಸಿದ ಕಡಲೆ ಬೇಳೆ – 1 ಕಪ್
* ಬೆಲ್ಲ – 1/3 ಕಪ್
* ಉಪ್ಪು – ಅರ್ಧ ಟೀಸ್ಪೂನ್
Advertisement
Advertisement
* ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
* 4 ಗಂಟೆ ನೆನೆಸಿದ ಅಕ್ಕಿ – 1 ಕಪ್
* ಅರಿಶಿನ ಪುಡಿ – ಅರ್ಧ ಟೀಸ್ಪೂನ್
* ಕರಿಯಲು ಎಣ್ಣೆ
Advertisement
ಮಾಡುವ ವಿಧಾನ:
* ಕುಕ್ಕರಿನಲ್ಲಿ 1 ಕಪ್ ಆಗುವಷ್ಟು ಕಡಲೆ ಬೇಳೆ ಹಾಗು ಒಂದೂಕಾಲು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ 4 ಕೂಗು ಕೂಗಿಸಿ. ನಂತರ ಇದರಲ್ಲಿರುವ ನೀರನ್ನು ಬಸಿದುಕೊಳ್ಳಿ.
* ಕಡಲೆ ಬೇಳೆಯನ್ನು ಕುಕ್ಕರಿಗೆ ಹಾಕಿ, ಅದಕ್ಕೆ 1/3 ಕಪ್ ಬೆಲ್ಲ, ಕಾಲು ಚಮಚ ಉಪ್ಪು ಹಾಕಿ, ಬೆಲ್ಲ ಕರಗಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
* ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಗಟ್ಟಿಯಾಗುವವರೆಗೆ ಬೇಯಿಸಿ.
* ಮಿಕ್ಸಿ ಜಾರಿಗೆ 1 ಕಪ್ ಆಗುವಷ್ಟು ಅಕ್ಕಿ, ಅರ್ಧ ಚಮಚ ಉಪ್ಪು, ಕಾಲು ಚಮಚ ಅರಿಶಿನ ಪುಡಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿ. ಇದನ್ನು ಪಾತ್ರೆಗೆ ಹಾಕಿಕೊಳ್ಳಿ.
* ಕಡಲೆಬೇಳೆ ಮತ್ತು ಬೆಲ್ಲದ ಮಿಶ್ರಣವನ್ನು ಉಂಡೆಗಳಾಗಿ ಮಾಡಿ. ಇವುಗಳನ್ನು ರುಬ್ಬಿದ ಹಿಟ್ಟಿನಲ್ಲಿ ಅದ್ದಿ.
* ಎಣ್ಣೆಯನ್ನು ಬಿಸಿ ಮಾಡಿ ಒಂದೊಂದಾಗಿ ಹಾಕಿ. ಗರಿ-ಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿದು ತೆಗೆಯಿರಿ.
– ರುಚಿಯಾದ ಕಡಲೆಬೇಳೆ ಸುಕ್ಕಿನುಂಡೆ ಸವಿಯಲು ಸಿದ್ಧ.