ಉಡುಪಿ: ಹಿಜಬ್ ಹೋರಾಟಗಾರರು ಮತ್ತು ಬೆಂಬಲಿಗರು ಕೇಳುವಂತಹ, ಶರಿಯತ್ ಕಾನೂನು ಬೆಂಗಳೂರಿನ ಚಂದ್ರು ಕೊಲೆಗಾರರ ವಿರುದ್ಧ ಕೂಡ ಜಾರಿಯಾಗಬೇಕಾ ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ.
Advertisement
ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಚಂದ್ರು ಕೊಲೆ ಮಾಡಲಾಯಿತು. ಕೊಲೆಯ ವೀಡಿಯೋ ನಮಗೆ ನೋಡಲು ಸಾಧ್ಯವಿಲ್ಲ. ಇದು ಬಹಳ ದುರದೃಷ್ಟಕರ ಬೆಳವಣಿಗೆ. ಹಿಂದೂ ಮೊಹಲ್ಲಾಗಳಲ್ಲಿ ಇಂತಹ ಕೊಲೆ ಎಂದಿಗೂ ನಡೆಯಲ್ಲ. ಸ್ಥಳೀಯ ನಿವಾಸಿಗಳು ಯಾರೂ ಚಂದ್ರು ರಕ್ಷಣೆಗೆ ಬಂದಿಲ್ಲ. ಸುತ್ತಮುತ್ತ ಇದ್ದವರು ಎಲ್ಲರೂ ಪೈಶಾಚಿಕ ಕೃತ್ಯವನ್ನು ಮೆರೆದಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಪ್ರಗತಿಪರರು ಎಲ್ಲಿ ಹೋಗಿದ್ದಾರೆ? ಹಲಾಲ್ ವಿಚಾರದಲ್ಲಿ ಮಾಂಸ ತಿಂದ ಪ್ರಗತಿಪರರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್
Advertisement
Advertisement
ಮುಸ್ಲಿಮರಿಗೆ ಬೆಂಬಲಿಸುವುದು ಸೌಹಾರ್ದತೆ ಎಂಬ ಫ್ಯಾಶನ್ ಭಾರತದಲ್ಲಿ ನಡೆಯುತ್ತಿದೆ. ಹಿಂದೂಗಳ ಪರವಾಗಿ ಮಾತನಾಡಿದರೆ ಕೋಮುವಾದ ಎಂದು ನಿರ್ಧಾರವಾಗಿದೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಬೆಂಗಳೂರು ಘಟನೆ ಬಗ್ಗೆ ಏನು ಹೇಳುತ್ತಾರೆ? ಸಣ್ಣ ವಿಚಾರದಲ್ಲಿ ಬೆಂಗಳೂರಿನ ಚಂದ್ರು ಕೊಲೆಯಾಗಿದೆ. ಸಾಮೂಹಿಕವಾಗಿ ಕಟ್ಟಿಹಾಕಿ ಕಲ್ಲೆಸೆದು ಕೊಲ್ಲಬೇಕು. ಶರಿಯತ್ ಕಾನೂನು ಮೂಲಕ ಶಿಕ್ಷೆ ಆಗಬೇಕು. ಹಿಜಬ್ ವಿಚಾರಕ್ಕೆ ಶರಿಯತ್ ಕಾನೂನು ಅಂತೀರಾ, ಚಂದ್ರು ಕೊಲೆಗೆ ಶರಿಯತ್ ಕಾನೂನು ಜಾರಿ ಬೇಡವೇ ಎಂದಿದ್ದಾರೆ.
Advertisement
ಮುಸಲ್ಮಾನ ಸಮುದಾಯ ಬಹಿಷ್ಕಾರ ಹಾಕಲಿ: ಅಪರಾಧ, ಕೊಲೆಯಾದಾಗ ಸಂವಿಧಾನ, ಕೋರ್ಟ್ ಎಂದು ಹೇಳಲಾಗುತ್ತದೆ. ಹಿಜಬ್ ವಿಚಾರದ ಹೋರಾಟ, ನಿಮಗೆ ಇಷ್ಟ ಬರುವ ವಿಚಾರದಲ್ಲಿ ಶರಿಯತ್ ಕಾನೂನಿಗೆ ಒತ್ತಾಯ ಮಾಡಲಾಗುತ್ತದೆ. ಈ ನಡೆ ಸರಿಯಲ್ಲ. ಪ್ರಜ್ಞಾವಂತ ಮುಸಲ್ಮಾನರು ಜಾಗೃತರಾಗಬೇಕು. ಆರೋಪಿಗಳಿಗೆ ಸಮಾಜದಲ್ಲಿ ಬಹಿಷ್ಕಾರ ಹಾಕಬೇಕು. ಮುಸಲ್ಮಾನ ಸಮುದಾಯದ ಒಳ್ಳೆಯವರು ಕೂಡಲೇ ಜಾಗೃತರಾಗಿ ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ಮುಸಲ್ಮಾನ ಬಾಂಧವರನ್ನು ಒಂದೇ ದೃಷ್ಟಿಯಲ್ಲಿ ನೋಡುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್