ಯಾವುದೇ ಒಂದು ದೇಶ ವಿಶ್ವದ ಒತ್ತಡಕ್ಕೆ ಬಗ್ಗದೇ ತನ್ನದೇ ಆದ ವಿದೇಶಾಂಗ ನೀತಿಯನ್ನು ಅಳವಡಿಸಿದರೆ ಏನು ಆಗುತ್ತದೆ ಎಂಬ ಪ್ರಶ್ನೆಗೆ ಇಡೀ ವಿಶ್ವಕ್ಕೆ ಭಾರತ (India) ಈಗ ಉತ್ತರ ನೀಡಿದೆ. ಹಿಂದೆ ಅಮೆರಿಕದಿಂದ ದಿಗ್ಭಂಧನ ವಿಧಿಸಿದ್ದ ಭಾರತ ಈಗ ಅಮೆರಿಕದ (USA) ಮಿತ್ರ ದೇಶವಾಗುತ್ತಾ ಸಾಗುತ್ತಿದೆ. ಇದಕ್ಕೆ ಸಾಕ್ಷಿ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಮೆರಿಕ ಪ್ರವಾಸ. ಶ್ವೇತ ಭವನದಲ್ಲಿ ಡಿನ್ನರ್, ದ್ವಿಪಕ್ಷೀಯ ಮಾತುಕತೆ, ಅಮೆರಿಕ ಸಂಸತ್‌ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ, ಉದ್ಯಮಿಗಳ ಜೊತೆ ಮಾತುಕತೆ, ಹಲವು ರಕ್ಷಣಾ ಒಪ್ಪಂದ, ಬಾಹ್ಯಾಕಾಶ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಈಗ ಒಲವು ವ್ಯಕ್ತಪಡಿಸುತ್ತಿರುವ ಅಮೆರಿಕ ಈ ಹಿಂದೆ ಭಾರತಕ್ಕೆ ಶಾಕ್ ನೀಡಿತ್ತು. ಈ ಶಾಕ್‌ಗೆ ಅಂಜದೇ ಭಾರತ ಸ್ವಾಭಿಮಾನಿಯಾಗಿ ಮುನ್ನಡೆದು ಜಗತ್ತಿಗೆ ತನ್ನ ಶಕ್ತಿಯನ್ನು ತೋರಿಸಿತ್ತು. ಅಮೆರಿಕದ ದಿಗ್ಭಂಧನಕ್ಕೆ ಅಂಜದೇ ವಿಜ್ಞಾನಿಗಳ ಪರಿಶ್ರಮದಿಂದ ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ. ಈಗ ಚಂದ್ರನ ಅಂಗಳದಲ್ಲಿ ಮೂರನೇ ಹೆಜ್ಜೆ ಇಡಲು ಭಾರತ ಸಜ್ಜಾಗಿದ್ದು, ಇಂದು ಭಾರತದ ಚಂದ್ರಯಾನ-3 (Chandrayaan-3) ಗಗನನೌಕೆಯು ಮಧ್ಯಾಹ್ನ ಉಡಾವಣೆಗೊಳ್ಳಲಿದೆ.
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತ ಅಲಿಪ್ತ ನೀತಿಯನ್ನು ಅನುಸರಿಸಿತು. ಈ ಸಂದರ್ಭದಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟ (USSR) ನಡುವೆ ಶೀತಲ ಸಮರ ನಡೆಯುತ್ತಿತ್ತು. ಭಾರತ ಎರಡೂ ದೇಶದ ಪರವಾಗಿ ನಿಲ್ಲದೇ ತಟಸ್ಥವಾಗಿ ನಿಂತು ಶಾಂತಿ ಮಂತ್ರವನ್ನು ಜಪಿಸುತ್ತಿತ್ತು. ಭಾರತ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಂತೆ ಇನ್ನೊಂದು ಕಡೆ ಸದ್ದಿಲ್ಲದೇ ಅಣುಬಾಂಬ್ (Nuclear Bomb) ತಯಾರಿಸುತ್ತಿತ್ತು. ಅಣುಬಾಂಬ್ ತಯಾರಿಸಲು ಮುಂದಾಗಿದ್ದು ಯಾಕೆ ಎನ್ನುವುದಕ್ಕೂ ಕಾರಣವಿದೆ. ಅಮೆರಿಕ, ಸೋವಿಯತ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಚೀನಾಗಳು ಅಣುಬಾಂಬ್ ತಯಾರಿಸಿ ಪರೀಕ್ಷೆ ಮಾಡಿದ್ದವು. ಭಾರತ ಎರಡು ಗಡಿಯಲ್ಲಿರುವ ಚೀನಾ ಮತ್ತು ಪಾಕಿಸ್ತಾನ ರಕ್ಷಣಾ ಕ್ಷೇತ್ರದಲ್ಲಿ ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಅಣುಬಾಂಬ್ ನಮಗೆ ಅಗತ್ಯ ಎನ್ನುವುದು ಸರ್ಕಾರಕ್ಕೆ ಮನವರಿಕೆ ಆಗಿತ್ತು. ಎಲ್ಲಾ ಅಡೆ ತಡೆ ನಿವಾರಿಸಿಕೊಂಡು ಕೊನೆಗೆ 1974ರ ಮೇ 18ರಂದು ಇಂದಿರಾ ಗಾಂಧಿ ಸರ್ಕಾರ ರಾಜಸ್ಥಾನದ ಪೋಖ್ರಾನ್‌ನಲ್ಲಿ ಅಣು ಬಾಂಬನ್ನು ಯಶಸ್ವಿಯಾಗಿ ಸ್ಫೋಟಿಸಿತು. ಈ ಮೂಲಕ ಅಣುಬಾಂಬ್ ಹೊಂದಿದ ಐದನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?
Advertisement
Advertisement
ಭಾರತ ಅಣುಬಾಂಬನ್ನು ಹೊಂದಿದ್ದನ್ನು ಅಮೆರಿಕಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದರಲ್ಲೂ ಅಣುಬಾಂಬ್ ಹೊಂದಿರುವ ಯಾವ ದೇಶಗಳಿಗೆ ತಿಳಿಯದಂತೆ ಭಾರತ ರಹಸ್ಯವಾಗಿ ಸ್ಫೋಟ ಮಾಡಿದ್ದು ಅಮೆರಿಕದ ಕಣ್ಣು ಕುಕ್ಕಿತ್ತು. ಅಣುಬಾಂಬ್ ಸ್ಫೋಟ ಮಾಡಿದ್ದಕ್ಕೆ ಅಮೆರಿಕ ಹಲವು ದಿಗ್ಭಂಧನ ವಿಧಿಸಿತ್ತು. ಇದರ ನೇರ ಪರಿಣಾಮ ಭಾರತದ ಬಾಹ್ಯಾಕಾಶ ಸಂಶೋಧನೆಯ ಮೇಲೆ ತಟ್ಟಿತು. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು
Advertisement
Advertisement
1980ರಲ್ಲೇ ಭಾರತ ಆತೀ ದೊಡ್ಡ ರಾಕೆಟ್ (Rocket) ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಅಂದಿನ ಕಾಲಕ್ಕೆ ಅದಾಗಲೇ ರಷ್ಯಾ, ಜಪಾನ್ ಮತ್ತು ಅಮೆರಿಕ ದೇಶಗಳು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದವು. ಆದರೆ ರಾಕೆಟ್ ಮೇಲಕ್ಕೆ ಚಿಮ್ಮಲು ಅಗತ್ಯವಾದ ಕ್ರಯೋಜೆನಿಕ್ ಎಂಜಿನ್ (Cryogenic Engine) ಭಾರತದಲ್ಲಿ ಇರಲಿಲ್ಲ. ಕ್ರಯೋಜೆನಿಕ್ ಎಂಜಿನ್‌ನಲ್ಲಿ ದ್ರವ ಜಲಜನಕವನ್ನು ಇಂಧನವಾಗಿ ಮತ್ತು ಆಮ್ಲಜನಕವನ್ನು ಬಳಸಲಾಗುತ್ತದೆ. ರಾಕೆಟ್‌ನಲ್ಲಿ ಗಾತ್ರವೇ ಹೆಚ್ಚಿರುವ ಕಾರಣ ಹೆಚ್ಚಿನ ತೂಕದ ಉಪಗ್ರಹಗಳನ್ನು ಹೊತ್ತುಕೊಂಡು ಹೋಗಬೇಕಾದರೆ ಕ್ರಯೋಜೆನಿಕ್ ಎಂಜಿನ್ ಅಗತ್ಯವಾಗಿತ್ತು. ಅನಿಲರೂಪದಲ್ಲಿನ ಇಂಧನಗಳನ್ನು ಅತಿ ಕಡಿಮೆ ತಾಪಮಾನದಲ್ಲಿ (- 150° ಗಿಂತ ಕಡಿಮೆ ಉಷ್ಣತೆ) ದ್ರವೀಕರಿಸುವುದರಿಂದ ಕಡಿಮೆ ಗಾತ್ರದಲ್ಲಿ ಹೆಚ್ಚಿನ ಇಂಧನ ತುಂಬಿಸಬಹದಿತ್ತು. ಈ ಕಾರಣಕ್ಕೆ ಭಾರತ ಅಮೆರಿಕದ ಎಂಜಿನ್ ತಯಾರಕಾರದ ಜನರಲ್ ಡೈನಾಮಿಕ್ಸ್ ಕಾರ್ಪೋರೇಷನ್ ಸಂಸ್ಥೆಯನ್ನು ಸಂಪರ್ಕಿಸಿತ್ತು. ಆದರೆ ಈ ಎಂಜಿನ್ ಬೆಲೆ ದುಬಾರಿಯಾದ್ದರಿಂದ ಈ ಯೋಜನೆಯನ್ನೂ ಕೂಡ ಭಾರತ ಕೈಬಿಟ್ಟಿತ್ತು. ಬಳಿಕ ಅಂತಿಮ ಪ್ರಯತ್ನವಾಗಿ ಭಾರತ ರಷ್ಯಾವನ್ನು ಸಂಪರ್ಕಿಸಿತ್ತು. ಆರಂಭದಲ್ಲಿ ರಷ್ಯಾ (Russia) ಕೂಡ ಭಾರತಕ್ಕೆ ಸುಧಾರಿತ ದರದಲ್ಲಿ ಎರಡು ಕ್ರಯೋಜೆನಿಕ್ ಎಂಜಿನ್ ನೀಡಲು ಒಪ್ಪಿಗೆ ನೀಡಿತ್ತು. ಕ್ರಯೋಜೆನಿಕ್ ಎಂಜಿನ್ ಕನಸು ಕಾಣುತ್ತಿದ್ದ ಸಮಯದಲ್ಲೇ ಅಟಲ್ ಬಿಹಾರಿ ನೇತೃತ್ವದ ಸರ್ಕಾರ 1998ರಲ್ಲಿ ಪೋಖ್ರಾನ್‌ನಲ್ಲಿ ಎರಡನೇ ಬಾರಿಗೆ ಅಣುಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಮತ್ತೊಮ್ಮೆ ವಿಶ್ವಕ್ಕೆ ಶಾಕ್ ನೀಡಿತು. ಇದನ್ನೂ ಓದಿ: ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-3ಗೆ ಬೆಳಗಾವಿಯ ಯುವ ವಿಜ್ಞಾನಿಯ ಕೊಡುಗೆ
ಈ ಸಂದರ್ಭದಲ್ಲಿ ಅಡ್ಡಗಾಲು ಹಾಕಿದ ಅಮೆರಿಕ ಭಾರತ ಈ ತಂತ್ರಜ್ಞಾನವನ್ನು ತನ್ನ ಮಿಲಿಟರಿ ಶಕ್ತಿ ಅಭಿವೃದ್ಧಿಗೆ ಬಳಕೆ ಮಾಡುವ ಅಪಾಯವಿದೆ ಎಂದು ಹೇಳಿ ರಷ್ಯಾ-ಭಾರತ ನಡುವಿನ ಒಪ್ಪಂದವನ್ನು ಅಮಾನತು ಮಾಡಿತು. ಅಲ್ಲದೆ ರಷ್ಯಾ ಭಾರತಕ್ಕೆ ತಂತ್ರಜ್ಞಾನ ನೀಡದಂತೆ ಒತ್ತಡ ಹೇರಿತ್ತು. ಹೀಗಾಗಿ ರಷ್ಯಾ ಕೂಡ ತಂತ್ರಜ್ಞಾನ ನೀಡುವುದರಿಂದ ಹಿಂದೆ ಸರಿದಿತ್ತು. ಯಾವುದೇ ರಾಕೆಟ್, ಉಪಗ್ರಹವನ್ನು ಅಭಿವೃದ್ಧಿ ಪಡಿಸಿದರೂ ಕ್ರಯೋಜೆನಿಕ್ ಎಂಜಿನ್ ಇಲ್ಲದೇ ಇದ್ದರೆ ನಭಕ್ಕೆ ಜಿಗಿಯಲು ಸಾಧ್ಯವೇ ಇಲ್ಲ. ಅಮೆರಿಕದ ಕುತಂತ್ರದಿಂದ ಭಾರತದ ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಗೆ ಬಹಳ ಹಿನ್ನಡೆಯಾಯಿತು.
ಭಾರತದ ಸಂಶೋಧನೆಗೆ ಹಿನ್ನಡೆಯಾದರೂ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ನಿರಂತರ ಪ್ರಯತ್ನ ನಡೆಸುತ್ತಲೇ ಇತ್ತು. ನಂತರ ದಿನಗಳಲ್ಲಿ ಭಾರತ ಉತ್ತಮ ಸಂಬಂಧ ಬೆಳೆಸಿದ ಪರಿಣಾಮ ರಷ್ಯಾ ಕ್ರಯೋಜೆನಿಕ್ ತಂತ್ರಜ್ಞಾನ ನೀಡಲು ಒಪ್ಪಿಕೊಂಡಿತು. ರಷ್ಯಾದ ತಂತ್ರಜ್ಞಾನ ಬಳಸಿ ಐದು ಜಿಎಸ್‌ಎಲ್‌ವಿ ರಾಕೆಟ್ ಅನ್ನು ಇಸ್ರೋ ಉಡಾವಣೆ ಮಾಡಿತ್ತು. ಇದರಲ್ಲಿ ಮೂರು ಉಡಾವಣೆ ಯಶಸ್ವಿಯಾಗಿತ್ತು. ಇದನ್ನೂ ಓದಿ: ಇಂದು ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು
ಇನ್ನೊಂದು ಕಡೆಯಲ್ಲಿ ಭಾರತದ ವಿಜ್ಞಾನಿಗಳು ಪಣತೊಟ್ಟು ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿ ಪಡಿಸುತ್ತಿದ್ದರು. ಕೊನೆಗೆ 2003ರಲ್ಲಿ ಸ್ವದೇಶಿ ಕ್ರಯೋಜನಿಕ್ ಎಂಜಿನ್ ತಯಾರಾಗಿದ್ದರೂ ಹಲವು ಬಾರಿ ರಾಕೆಟ್ ಉಡಾವಣೆ ವಿಫಲವಾಗಿತ್ತು. ಅಂತಿಮವಾಗಿ 2014ರಲ್ಲಿ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಬಳಸಿ ಜಿಎಸ್‌ಎಲ್‌ವಿ (GSLV) ರಾಕೆಟ್ ಉಡಾವಣೆ ಮಾಡುವ ಮೂಲಕ ಭಾರತ ಯಶಸ್ವಿಯಾಗಿ ಕ್ರಯೋಜೆನಿಕ್ ಎಂಜಿನ್ ಹೊಂದಿದ ದೇಶಗಳ ಪಟ್ಟಿಗೆ ಸೇರ್ಪಡೆಯಾಯಿತು.
ಭಾರತ 2014ರಲ್ಲಿ ಈ ಸಾಧನೆ ಮಾಡಿದ್ದರೆ ಅಮೆರಿಕ 1963, ಜಪಾನ್ 1977, ಫ್ರಾನ್ಸ್ 1979, ಚೀನಾ 1984, ರಷ್ಯಾ 1987ರಲ್ಲಿ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿ ಪಡಿಸಿದ್ದವು. ಒಂದು ವೇಳೆ ಭಾರತಕ್ಕೆ 1990ರ ದಶಕದಲ್ಲೇ ಕ್ರಯೋಜೆನಿಕ್ ಎಂಜಿನ್ ಸಿಕ್ಕಿದ್ದರೆ ಇಷ್ಟು ಹೊತ್ತಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುತ್ತಿತ್ತು.
Web Stories