ಹುಬ್ಬಳ್ಳಿ: (Hubballi) ಸರಳವಾಸ್ತು ಅನ್ನೋ ಸಾಮಾಜ್ಯವನ್ನು ಕಟ್ಟಿ ಭೀಕರವಾಗಿ ಕೊಲೆಯಾದ ಚಂದ್ರಶೇಖರ್ ಗುರೂಜಿ (Chandrashekhar Guruji) ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಒಂದೇ ಕುಟುಂಬದಂತಿದ್ದ ಗುರೂಜಿ ಪರಿವಾರ ಗ್ರೂಪ್‌ಗೆ ಹುಳಿ ಹಿಂಡಿದವರು ಅವರ ಅಣ್ಣನ ಮಕ್ಕಳು ಅನ್ನೋದು ಬಯಲಾಗಿದೆ.
ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಇದಕ್ಕೆ ಪ್ರಮುಖ ಕಾರಣ ಆಪ್ತರಲ್ಲಿ ಮೂಡಿದ ಮನಸ್ತಾಪ. ಯಾವಾಗ ಅವರ ಅಣ್ಣನ ಮಕ್ಕಳು, ಗುರೂಜಿ ಕಂಪನಿಗೆ ಎಂಟ್ರಿ ಆದ್ರೋ ಅಲ್ಲಿಂದ ಸಮಸ್ಯೆ ಶುರುವಾಗಿದೆ. 2014ರ ನಂತರ ಗುರೂಜಿ ಸರಳವಾಸ್ತು (Saralavastu) ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಚಂದ್ರಶೇಖರ ಗುರೂಜಿ, ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಅಂತ ಹತ್ಯೆ ಆರೋಪಿ ಮಂಜುನಾಥ ಸ್ವತಃ ಗುರೂಜಿ ಮುಂದೆ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: ಮಂಗಳೂರಿನಲ್ಲಿ ಕೆಲ್ಸ- ಸಿಎಂಗೆ ಧನ್ಯವಾದ ಹೇಳಿದ ಪ್ರವೀಣ್ ನೆಟ್ಟಾರು ಪತ್ನಿ
ಇನ್ನು 2019 ಜೂನ್ 24ರಂದು ಮಂಜುನಾಥ ಮರೆವಾಡ, ಚಂದ್ರಶೇಖರ್ ಗುರೂಜಿಗೆ ಮಾಡಿದ್ದ ವಾಟ್ಸಾಪ್ ಮೆಸೇಜ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ವಾಟ್ಸ್ ಮೆಸೇಜ್‌ನಲ್ಲಿರುವ ಪ್ರಮುಖ ಅಂಶಗಳು ಹೀಗಿವೆ.
ಮಂಜುನಾಥ್ ವಾಟ್ಸಾಪ್ ಸಂದೇಶದಲ್ಲಿ ಏನಿದೆ?
ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ 2ನೇ ತಂದೆಯಾಗಿದ್ದೀರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದೆವು. ಆದ್ರೆ ಯಾವಾಗ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ಕೊಟ್ರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದೀರಿ. ಆದರೆ ನಿಮ್ಮ ಅಣ್ಣನ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಶುರು ಪ್ರಯತ್ನಿಸಿದ್ದಾರೆ. ನಿಮ್ಮ ಅಣ್ಣನ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ಅವನತಿ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ದೆವು. ಆದರೆ ನೀವು ನಮ್ಮ ಪಾಲಿನ ಯಮ ಆದಿರಿ. ನಿಮಗೆ ನಾವು ಏನು ಮಾಡಿದ್ವಿ? ನಮ್ಮ ಕಣ್ಣೀರು ನಿಮ್ಮನ್ನ ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರಿ. ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೇ ಬಯಸುತ್ತೇವೆ ಎಂದು ಸಂದೇಶದಲ್ಲಿದೆ. ಇದನ್ನೂ ಓದಿ: ಅಕ್ರಮ ಒತ್ತುವರಿ ತೆರವಿಗೆ ಮುಂದಾದ ತಹಶೀಲ್ದಾರ್‌ಗೆ ವಕೀಲೆಯಿಂದ ಆವಾಜ್
ಇಷ್ಟು ಮಾತ್ರವಲ್ಲ ಇನ್ನೂ ಸಾಕಷ್ಟು ಮೆಸೇಜ್‌ಗಳು ಆರೋಪಿಗಳಿಂದ ಗುರೂಜಿಗೆ ಹೋಗಿವೆ. ಆದರೆ ಚಂದ್ರಶೇಖರ ಗುರೂಜಿ ಮಾತ್ರ ಇವುಗಳಿಗೆ ತಲೆಕೆಡಿಸಿಕೊಂಡಿಲ್ಲ. ಗುರೂಜಿ, ಸಿಬ್ಬಂದಿ ಮೇಲಿಟ್ಟಿದ್ದ ಕಾಳಜಿಯು ಅಣ್ಣನ ಮಕ್ಕಳು ಎಂಟ್ರಿ ಬಳಿಕ ಕಡಿಮೆಯಾಗಿದೆ. ಇದರಿಂದ ಹುಟ್ಟಿಕೊಂಡ ಮನಸ್ತಾಪ ಗುರೂಜಿ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.