ಚಿಕ್ಕಮಗಳೂರು: ಹೊನ್ನಾಳಿ ಶಾಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರಶೇಖರ್ (Chandashekhar) ಸಾವಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಾಕಷ್ಟು ಅನುಮಾನಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವರದಿ ಕೇಳಿದ್ದಾರೆ.
Advertisement
ಸಿಎಂ ವರದಿ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು, ತನಿಖಾ ತಂಡ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಯ ವಿನಯ್ ಗುರೂಜಿ (Vinay Guruji) ಆಶ್ರಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಚನ್ನಗಿರಿ ಪಿಎಸ್‍ಐ ನೇತೃತ್ವದ ನಾಲ್ವರ ತಂಡ ಆಶ್ರಮಕ್ಕೆ ಭೇಟಿ ಕೊಟ್ಟಿದೆ. ಪ್ರಕರಣ ಸಂಬಂಧ ಈವರೆಗೂ 4 ಬಾರಿ ಪೊಲೀಸರು ಭೇಟಿ ನೀಡಿದ್ದಾರೆ. ಆಶ್ರಮದ ಸಿಬ್ಬಂದಿ, ಉಸ್ತುವಾರಿ ವಹಿಸಿರುವ ಭಕ್ತರ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್ ಮಾರ್ಟಂ ರಿಪೋರ್ಟ್?
Advertisement
Advertisement
ಇತ್ತ ಚಂದ್ರು ಸಾವಿಗೆ ನಿಖರವಾದ ಕಾರಣ ಇಂದು ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ಇದು ಕೊಲೆಯಲ್ಲ, ಅಪಘಾತದಿಂದ ಉಂಟಾದ ಸಾವು ಎಂಬುದು ಪೊಲೀಸ್ ಹಾಗೂ ಎಫ್‍ಎಸ್‍ಎಲ್ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದೊಂದು ಪೂರ್ವನಿಯೋಜಿತ ಕೊಲೆ ಅಂತ ಆರೋಪ ಮಾಡಿರೋದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರೋದು. ಇಂದು ಚಂದ್ರು ಪೋಸ್ಟ್‍ಮಾರ್ಟಂ ವರದಿ ಹಾಗೂ ಎಫ್‍ಎಸ್‍ಎಲ್ ರಿಪೋರ್ಟ್ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ.
Advertisement
ಈಗಾಗಲೇ ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ (Honnalli Police Station) ಯಲ್ಲಿ 302 ಹಾಗೂ 201 ಕೇಸ್ ಕೂಡ ದಾಖಲಾಗಿದೆ. ಚಂದ್ರುವಿನ ಕೊಲೆಯಾಗಿದೆ, ಅಲ್ಲದೆ ಆತನನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಎಫ್‍ಎಸ್‍ಎಲ್ ಅಧಿಕಾರಿಗಳ ಎರಡು ತಂಡ ಅಪಘಾತ ನಡೆದ ಹೊನ್ನಾಳಿ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪರಿಶೀಲನೆ ಮಾಡಿ ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ. ಪೊಲೀಸರು ಕೂಡ ಟೆಕ್ನಿಕಲ್ ಎವಿಡೆನ್ಸ್ ಕೂಡ ಕಲೆಕ್ಟ್ ಮಾಡಿಲಾಗಿದ್ದು, ಇದೊಂದು ಅಪಘಾತ, ಓವರ್ ಸ್ಪೀಡ್‍ನಲ್ಲಿ ಬಂದ ಹಿನ್ನೆಲೆ ಚಾನಲ್ ನಲ್ಲಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.