ರಾಘವ ಲಾರೆನ್ಸ್ (Raghava Lawrence), ಕಂಗನಾ ರಣಾವತ್ (Kangana Ranaut) ನಟನೆಯ ಚಂದ್ರಮುಖಿ 2 ಸಿನಿಮಾದ ಟ್ರೈಲರ್ ಸೆಪ್ಟೆಂಬರ್ 3ರಂದು ರಿಲೀಸ್ ಆಗಿದೆ. ಸೆ.15ಕ್ಕೆ ಚಂದ್ರಮುಖಿ 2 (Chandramukhi 2) ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಟ್ರೈಲರ್ ಕುತೂಹಲಕಾರಿಯಾಗಿದೆ. ಇದನ್ನೂ ಓದಿ:ಸ್ಕ್ರಿಪ್ಟ್ ಬರೆಯುವಾಗ ರಪ್ ಅಂತ ರಮ್ಯಾ ಪಾಸಾದ್ರು: ನಿರ್ದೇಶಕ ವಿಜಯ ಪ್ರಸಾದ್
ಚಿತ್ರದ ಟ್ರೈಲರ್‌ನಲ್ಲಿ ದೊಡ್ಡ ಅವಿಭಕ್ತ ಕುಟುಂಬವೊಂದು ಅರಮನೆಯಂತಹ ಬಂಗಲೆಗೆ ಬರುವುದನ್ನು ನೋಡಬಹುದು. ಈ ಬಂಗಲೆಯಲ್ಲಿ ಒಂದು ಕೋಣೆಯನ್ನು ಮಾತ್ರ ಪ್ರವೇಶಿಸಬಾರದು. ಅದು ಬಂಗಲೆಯ ದಕ್ಷಿಣ ಬ್ಲಾಕ್‌ನಲ್ಲಿರುವ ಕೋಣೆ. ಇದರ ಬಾಗಿಲು ತೆಗೆದರೆ ಸಮಸ್ಯೆಗಳು ಶುರುವಾಗುತ್ತವೆ. ಚಂದ್ರಮುಖಿ ಕಥೆಗೆ 17 ವರ್ಷಗಳ ನಂತರ ಹೊಸ ತಿರುವು ಸಿಗುತ್ತದೆ. 200 ವರ್ಷಗಳಷ್ಟು ಹಳೆಯದಾದ ಚಂದ್ರಮುಖಿ ಮತ್ತು ರಾಜ ವೆಟ್ಟೈಯನ್ ಅವರ ಸೇಡಿನ ಕಥೆ. ಈ ಕಥೆಯನ್ನು ವರ್ತಮಾನಕ್ಕೆ ಹೊಂದಿಸಿರುವುದನ್ನು ಟ್ರೈಲರ್‌ನಲ್ಲಿ ನೋಡಬಹುದಾಗಿದೆ.
ಪಿ. ವಾಸು ನಿರ್ದೇಶನದ ಚಂದ್ರಮುಖಿ 2ನಲ್ಲಿ ರಾಘವ ಲಾರೆನ್ಸ್, ಕಂಗನಾ, ರಾಧಿಕಾ ಶರತ್ ಕುಮಾರ್, ವಡಿವೇಲು, ಲಕ್ಷ್ಮಿ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಕ್ಸಸ್‌ಗಾಗಿ ಎದುರು ನೋಡ್ತಿರುವ ಕಂಗನಾ ರಣಾವತ್‌ಗೆ ಚಂದ್ರಮುಖಿ 2 ಸಿನಿಮಾ ಕೈ ಹಿಡಿಯುತ್ತಾ? ರಾಘವ್-ಕಂಗನಾ ಕಾಂಬೋ ಕಮಾಲ್ ಮಾಡುತ್ತಾ ಕಾಯಬೇಕಿದೆ.