ಬೆಂಗಳೂರು: ಚಂದ್ರನ (Lunar Eclipse) ಮೇಲೆ ಭೂಮಿಯ ಬೆಳಕು ಬೀಳುವುದೇ ಚಂದ್ರಗ್ರಹಣ (Chandra Grahan). ಇಂದು (ಭಾನುವಾರ) ಸಂಭವಿಸಿದ ಅಪರೂಪದ ಚಂದ್ರಗ್ರಹಣ ಆಗಸದಲ್ಲಿ ವಿಸ್ಮಯ ಮೂಡಿಸಿತು. ನಭೋಮಂಡಲದಲ್ಲಿ ಸಂಭವಿಸಿದ ಈ ವಿಸ್ಮಯವನ್ನು ಜನರು ಕಣ್ತುಂಬಿಕೊಂಡು ಖುಷಿಪಟ್ಟರು.
ಭಾನುವಾರ ನಸುಕಿನ 1:04 ಗಂಟೆಗೆ ಸರಿಯಾಗಿ ಪಾರ್ಶ್ವ ಗ್ರಹಣ ಗೋಚರಿಸಿತು. 1:44 ಗಂಟೆಗೆ ಮಧ್ಯ ಕಾಲ ಗ್ರಹಣ ಹಾಗೂ 2:22 ಗಂಟೆಗೆ ಮೋಕ್ಷ ಕಾಲ ಗ್ರಹಣ ಗೋಚರಿಸಿತು. 3:55 ಗಂಟೆಗೆ ಸಂಪೂರ್ಣವಾಗಿ ಗ್ರಹಣ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ. ಇದನ್ನೂ ಓದಿ: ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ
Advertisement
Advertisement
ಇಂದು ಸಿಗಿ ಹುಣ್ಣಿಮೆಯ ಪರ್ವ ದಿನ. ರಾತ್ರಿ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣ ಸಂಭವಿಸಿತು. ಪಶ್ಚಿಮ ಬಂಗಾಳ ಸೇರಿ ದೇಶದ ವಿವಿಧೆಡೆ ಚಂದ್ರಗ್ರಹಣ ಗೋಚರಿಸಿತು. ಯುರೋಪ್, ಆಫ್ರಿಕಾ ಖಂಡದಲ್ಲಿ ಚಂದ್ರಗ್ರಹಣ ಭಾಗಶಃ ಗೋಚರಿಸಿತು. ಶರದ್ಪೂರ್ಣಿಮೆಯಂದು ಗಜಕೇಸರಿ ಯೋಗದಲ್ಲಿ ಈ ಚಂದ್ರಗ್ರಹಣ ಸಂಭವಿಸಿದೆ. 30 ವರ್ಷಗಳಿಗೊಮ್ಮೆ ಇಂತಹ ಚಂದ್ರಗ್ರಹಣ ಸಂಭವಿಸಲಿದೆ.
Advertisement
Advertisement
ಬೆಂಗಳೂರಿನ ನೆಹರೂ ತಾರಾಲಯ, ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ರಾತ್ರಿಯಾಗಿದ್ದರೂ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿ ದೂರದರ್ಶಕದ ಮೂಲಕ ಚಂದ್ರಗ್ರಹಣ ವಿಸ್ಮಯವನ್ನು ಕಣ್ತುಂಬಿಕೊಂಡರು. ದೂರದರ್ಶಕದ ಮೂಲಕ ಗುರುಗ್ರಹ, ಶನಿಗ್ರಹ ಮತ್ತು ಚಂದ್ರನನ್ನು ವೀಕ್ಷಿಸಿದರು. ಬರಿಗಣ್ಣಿನಿಂದಲೂ ಅನೇಕರು ಗ್ರಹಣ ವೀಕ್ಷಣೆ ಮಾಡಿದರು. ಈ ಗ್ರಹಣ ವೀಕ್ಷಣೆಗೆ ವಿಶೇಷ ಮುಂಜಾಗ್ರತಾ ಕ್ರಮಗಳ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದರು. ಇದನ್ನೂ ಓದಿ: ಚಂದ್ರಗ್ರಹಣದ ವೇಳೆಯೇ ಬಾಗಿಲು ತೆರೆದ ಉಡುಪಿ ಶ್ರೀಕೃಷ್ಣ ಮಠ
ಗ್ರಹಣದ ಹಿನ್ನೆಲೆಯಲ್ಲಿ ಹಲವೆಡೆ ದೇವಾಲಯಗಳು ಬಂದ್ ಆಗಿದ್ದವು. ಆದರೆ ಉಡುಪಿ ಶ್ರೀಕೃಷ್ಣ ಮಠ ತೆರೆದಿತ್ತು. ಅಲ್ಲದೇ ಮೌಢ್ಯ ವಿರೋಧಿಸಿ ಮೂಢನಂಬಿಕೆ ವಿರೋಧಿ ಒಕ್ಕೂಟದವರು ಸಮೋಸ ತಿಂದು ಚಂದ್ರಗ್ರಹಣಕ್ಕೆ ಸ್ವಾಗತ ಕೋರಿದರು. ಗ್ರಹಣದಂದು ಯಾವುದೇ ಆಹಾರ ಸೇವಿಸಬಾರದು ಎಂಬ ಆಚರಣೆಯನ್ನು ಈ ವೇಳೆ ಅಲ್ಲಗಳೆದರು. ನಟ ಚೇತನ್ ದಂಪತಿ ಕೂಡ ಈ ಮೌಢ್ಯ ವಿರೋಧಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
Web Stories