ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕುಟುಂಬ ಆರೋಗ್ಯ ವೃದ್ಧಿ ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಲು ದೈವ ಸಂಕಲ್ಪದ ಮೊರೆ ಹೋಗಿದೆ.
ಹೆಚ್‌ಡಿಕೆ ಕುಟುಂಬ ಬಿಡದಿ ಕೇತಗಾನಹಳ್ಳಿ ಬಳಿಯ ತೋಟದ ಮನೆಯಲ್ಲಿ ಶುಕ್ರವಾರದಿಂದ ಪಂಚರತ್ನ ಯಾತ್ರೆ ಶ್ರೇಯಸ್ಸಿಗಾಗಿ 11 ದಿನಗಳ ಕಾಲ ಚಂಡಿಕಾ ಯಾಗ ಹಾಗೂ ಮಾಜಿ ಪ್ರಧಾನಿ ದೇವೇಗೌಡರ (HD Deve Gowda) ಆರೋಗ್ಯ ವೃದ್ಧಿಗಾಗಿ ಕೋಟಿ ಮೃತ್ಯುಂಜಯ ಜಪ ಆಯೋಜನೆ ಮಾಡಿದ್ದಾರೆ. ಮೊದಲನೇ ದಿನ ಮಹಾಯಾಗದ ಪೂಜಾಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ.
Advertisement
Advertisement
ವಿವಿಧ ರಾಜ್ಯಗಳಿಂದ ಆಗಮಿಸಿರುವ 300 ಕ್ಕೂ ಅಧಿಕ ಪುರೋಹಿತರು ಈ ಮಹಾಯಾಗದಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಆರಂಭವಾದ ಮಹಾ ಯಾಗದಲ್ಲಿ ಮಂತ್ರ ಪಾರಾಯಣ ಹಾಗೂ ಪೂಜಾ ಸಂಕಲ್ಪ ನೆರವೇರಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನಡೆದ ಮೊದಲ ದಿನದ ಪೂಜಾ ವಿಧಿವಿಧಾನಗಳು ಮುಕ್ತಾಯವಾಗಿದೆ.
Advertisement
Advertisement
ಮೊದಲ ದಿನದ ಪೂಜಾ ಕೈಂಕರ್ಯದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ದಂಪತಿ ಸಾಂಪ್ರದಾಯಿಕ ಉಡುಗೆ ತೊಟ್ಟು ಸತತ 6 ಗಂಟೆಗಳ ಕಾಲ ಪೂಜಾ ಕೈಂಕರ್ಯ ನೆರವೇರಿಸಿದರು. ಮಾಜಿ ಸಚಿವ ಹೆಚ್‌ಡಿ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ, ನಿಖಿಲ್ ಪುತ್ರ ಅವ್ಯಾನ್ ದೇವ್ ಗೌಡ ಭಾಗಿಯಾಗಿದ್ದರು. ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಶೀಘ್ರ ಗುಣಮುಖರಾಗಲೆಂದು ಹಾಗೂ ಹಾಸನ ಟಿಕೆಟ್ ವಿಚಾರ ಕುರಿತು ಉಂಟಾಗಿರುವ ಗೊಂದಲ ಬಗೆಹರಿಸುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಇದನ್ನೂ ಓದಿ: ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ಮಾಡುತ್ತೇವೆ: ಗೋವಿಂದ ಕಾರಜೋಳ
ಹೆಚ್‌ಡಿ ಕುಮಾರಸ್ವಾಮಿ ಕುಟುಂಬ ದೈವದ ಮೊರೆ ಹೋಗಿರುವುದು ಹೊಸತೇನಲ್ಲ. ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವ ಹೆಚ್‌ಡಿಕೆ ಕುಟುಂಬ ಈ ಬಾರಿ ಚುನಾವಣೆಯ ಜನಾಶೀರ್ವಾದದ ಜೊತೆಗೆ ಲೋಕ ಕಲ್ಯಾಣಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರ ಅನುಗ್ರಹ ಪಡೆಯಲು ಮುಂದಾಗಿದೆ. ಇದನ್ನೂ ಓದಿ: ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ