ಚಂಡೀಘಡ್: ವಿಶ್ವದ ದೊಡ್ಡ ಐಟಿ ಕಂಪನಿ ಗೂಗಲ್ ಹರ್ಯಾಣದ 16 ವರ್ಷದ ಬಾಲಕನಿಗೆ ವಾರ್ಷಿಕ 1.44 ಕೋಟಿ ರೂ.ಗೆ ಸಂಬಳದಂತೆ ಉದ್ಯೋಗ ನೀಡಿದೆ ಎಂದು ಪ್ರಕಟವಾಗುತ್ತಿರುವ ಸುದ್ದಿಯ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಹರ್ಷಿತ್ ಶರ್ಮಾ ಎಂಬಾತನಿಗೆ ಉದ್ಯೋಗ ದೊರೆತಿದೆ ಎಂದು ಹೇಳಲಾಗುತ್ತಿದ್ದರೂ ಇದೂವರೆಗೂ ಗೂಗಲ್ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಈಗ ಚಂಡೀಘಡ್ ಶಿಕ್ಷಣ ಇಲಾಖೆ ಉದ್ಯೋಗ ಸಿಕ್ಕಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ತನಿಖೆ ಆರಂಭಿಸಿದೆ.
Advertisement
ಏನಿದು ಉದ್ಯೋಗ ಸುದ್ದಿ?
ಕುರುಕ್ಷೇತ್ರದ ಮಾತನ ಪ್ರದೇಶದ 16 ವರ್ಷದ ಬಾಲಕನಿಗೆ ಗೂಗಲ್ ಉದ್ಯೋಗ ನೀಡಲು ಮುಂದಾಗಿದ್ದು, ವಾರ್ಷಿಕ 1.44 ಕೋಟಿ ರೂ. ಸಂಭಾವನೆಯನ್ನು ನಿಗದಿ ಮಾಡಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
Advertisement
Advertisement
ಹರ್ಷಿತ್ ಚಂಡಿಗಢನ ಸರ್ಕಾರಿ ಮಾಡೆಲ್ ಸೀನಿಯರ್ ಸೆಕೆಂಡರಿ ಸ್ಕೂಲ್ (ಜಿಎಂಎಸ್‍ಎಸ್‍ಎಸ್) ನಲ್ಲಿ ಇದೇ ವರ್ಷ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾನೆ. ಹರ್ಷಿತ್ ಎರಡು ಮೊಬೈಲ್ ಫೋನ್‍ಗಳನ್ನು ಬಳಸುತ್ತಿದ್ದು, ಎರಡು ನಂಬರ್ ಸ್ವಿಚ್ ಆಫ್ ಆಗಿವೆ. ಫೇಸ್‍ಬುಕ್ ನಲ್ಲಿ ಮಾತ್ರ ಹರ್ಷಿತ್ `ಗೂಗಲ್‍ನಲ್ಲಿ ಕೆಲಸ ಮಾಡುತ್ತಿದ್ದು, ಕ್ಯಾಲಿಫೋರ್ನಿಯಾದಲ್ಲಿ ವಾಸ’ ಎಂದು ಬರೆದುಕೊಂಡಿದ್ದಾನೆ.
Advertisement
ಹರ್ಷಿತ್ ತನಗೆ ಗೂಗಲ್ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿರುವ ಬಗ್ಗೆ ನಮಗೆ ಮಾಹಿತಿ ನೀಡಿದ್ದಾನೆ. ಸದ್ಯ ಹರ್ಷಿತ್ ಪ್ರಯಾಣ ಮಾಡುತ್ತಿರುವದರಿಂದ ನಮಗೆ ಸಂಸ್ಥೆಯ ಆಫರ್ ಲೆಟರ್ ಕಳುಹಿಸಿಲ್ಲ ಎಂದು ಹರ್ಷಿತ್ ಕಾಲೇಜಿನ ಪ್ರಾಂಶುಪಾಲರಾದ ಇಂದ್ರಾ ಬೆನ್ವಾಲ್ ತಿಳಿಸಿದ್ದಾರೆ.
ಗೂಗಲ್ ಸಂಸ್ಥೆ ನಡೆಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹರ್ಷಿತ್ ಗ್ರಾಫಿಕ್ ಡಿಸೈನರ್ ಆಗಿ ನೇಮಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಒಂದು ವರ್ಷಗಳ ಕಾಲ ಹರ್ಷಿತ್ ತರಬೇತಿ ಪಡೆಯಲಿದ್ದು, ಈ ವೇಳೆ ತಿಂಗಳಿಗೆ 4 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ಪಡೆಯಲಿದ್ದಾನೆ. ಒಂದು ವರ್ಷದ ಬಳಿಕ ತಿಂಗಳಿಗೆ 12 ಲಕ್ಷ ರೂ. ಸಂಬಳ ಪಡೆಯಲಿದ್ದಾನೆ ಎಂದು ಜಿಎಂಎಸ್‍ಎಸ್‍ಎಸ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಹರ್ಷಿತ್ ಹೇಳಿದ್ದೇನು?
ನಾನು ಆನ್ ಲೈನ್‍ನಲ್ಲಿ ಉದ್ಯೋಗ ಹುಡುಕುತ್ತಿದ್ದೆ, ಮೇ ತಿಂಗಳಲ್ಲಿ ನಾನು ಗೂಗಲ್‍ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ರಿಂದ ಕಂಪನಿಯು ಆನ್‍ಲೈನ್ ನಲ್ಲಿ ನನ್ನನ್ನು ಸಂದರ್ಶನ ಮಾಡಿತ್ತು. ನಾನು ಕಳೆದ 10 ವರ್ಷಗಳಿಂದ ಗ್ರಾಫಿಕ್ ಡಿಸೈನಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ. ನಾನು ಪೋಸ್ಟರ್ ಡಿಸೈನಿಂಗ್ ವಿಭಾಗದಲ್ಲಿ ಆಯ್ಕೆಯಾಗಿದ್ದೇನೆ ಎಂದು ಹರ್ಷಿತ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾನೆ.
ಹರ್ಷಿತ್ ತಂದೆ-ತಾಯಿ ಶಿಕ್ಷಕರಾಗಿದ್ದಾರೆ. ಸದ್ಯ ಹರ್ಷಿತ್ ಸೋದರ ದೇರ್ ಬಾಸಿಯ ಆತನ ಸಂಬಂಧಿಯ ಮನೆಯಲ್ಲಿ ವಾಸವಾಗಿದ್ದಾನೆ.
ಗೂಗಲ್ ಹೇಳಿದ್ದೇನು?
ಮಾಧ್ಯಮಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಗೂಗಲ್ ವಕ್ತಾರರನ್ನು ಸಂಪರ್ಕಿಸಿದಾಗ ಅವರು, ಸದ್ಯ ಹರ್ಷಿತ್ ನೇಮಕವಾದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Who is #HarshitSharma, the Class 12 boy who designed his career to bag Rs 1.44 crore from #Googlehttps://t.co/TkVYDpuRfc pic.twitter.com/JrNt2u7zQW
— Financial Express (@FinancialXpress) August 1, 2017
गूगल का हर्षित शर्मा को 12 लाख पैकेज की नौकरी पर बड़ा झटका https://t.co/om0fMUI6ps #Google #HarshitSharma .@Google pic.twitter.com/aPf8TKqFLW
— Punjab Kesari (@punjabkesari) August 2, 2017
https://twitter.com/Timesolizer/status/892634927207993346
#Chandigarh Officials Claim 16-Year-Old #HarshitSharma Selected by #Google, Government Initiates Inquiryhttps://t.co/KTeFpoluhq
— India.com (@indiacom) August 2, 2017
16 साल के लड़के को Google ने दी नौकरी, 1.44 करोड़ का पैकेज #Google #HarshitSharma #JOb https://t.co/Sw3sE5wFCF pic.twitter.com/thUgUjB36T
— News24 (@news24tvchannel) August 1, 2017
Innovative 16-year-old #HarshitSharma grabs his dream job at an annual salary of Rs. 1.44 Crore https://t.co/lI8hvISnlf
— India Live Today (@inlivetoday) August 1, 2017
Rs 14400000 is salary of this school boy #HarshitSharma #Google https://t.co/6ew0jypTVd pic.twitter.com/TQWNr3vxXg
— News24 (@news24tvchannel) August 1, 2017
Class XII Government School Boy Bags Job In #Googlehttps://t.co/O9ZCO0RYH4 #HarshitSharma pic.twitter.com/I87x58uWqV
— kolkata24x7 English (@kolkata24x7eng) July 31, 2017