ಬೆಂಗಳೂರು: ಬಿಗ್‍ಬಾಸ್ ವಿನ್ನರ್ ರ‍್ಯಾಪರ್ ಚಂದನ್ ಶೆಟ್ಟಿಯ `ಟಕಿಲಾ’ ಸಾಂಗ್ ಹೊಸ ದಾಖಲೆ ಬರೆದಿದ್ದು, ಕೇವಲ ಮೂರು ತಿಂಗಳಲ್ಲಿ 2.53 ಕೋಟಿ ಬಾರಿ ವೀವ್ಸ್ ಕಂಡಿದೆ.
ಚಂದನ್ ಶೆಟ್ಟಿ ಬಿಗ್‍ಬಾಸ್ ಮನೆಯಲ್ಲಿರುವಾಗಲೇ ಈ ಸಾಂಗ್ ರಿಲೀಸ್ ಆಗಿತ್ತು. ಬಿಗ್‍ಬಾಸ್ ವೇದಿಕೆಯ ಮೇಲೆ ನಟ ಕಿಚ್ಚ ಸುದೀಪ್ ಈ ಸಾಂಗ್ ರಿಲೀಸ್ ಮಾಡಿದ್ದರು. ಬಿಡುಗಡೆಯಾದ 17 ಗಂಟೆಯಲ್ಲಿಯೇ ಇದು 1 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟು ದಾಖಲೆ ಬರೆದಿತ್ತು. ಇದೀಗ `ಟಕಿಲಾ’ ಸಾಂಗ್ 2.53 ಕೋಟಿ ಬಾರಿ ವೀಕ್ಷಣೆಯಾಗಿದ್ದು, 2.79 ಲಕ್ಷ ಲೈಕ್ಸ್ ಆಗಿದೆ.
Advertisement
Advertisement
ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರದ `ಬೊಂಬೆ ಹೇಳುತೈತೆ’ ಸಾಂಗ್ ಇದುವರೆಗೆ 5 ಕೋಟಿ ವೀವ್ಸ್, 1.72 ಲಕ್ಷ ಲೈಕ್ಸ್ ಪಡೆದಿದೆ. ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಚಿತ್ರದ `ಬೆಳಗೆದ್ದು ಯಾರ ಮುಖವಾ ನಾನು ನೋಡಲಿ’ ಹಾಡು 5 ಕೋಟಿ ವೀಕ್ಷಣೆಯಾಗಿದೆ. ಈ ಎರಡು ಸಾಂಗ್‍ಗಳು ಬಿಡುಗಡೆಯಾಗಿ ಒಂದು ವರ್ಷ ಕಳೆಯಿತು. ಆದರೆ ಚಂದನ್ ಶೆಟ್ಟಿಯ ಟಕಿಲಾ ಸಾಂಗ್ ಕೇವಲ ಮೂರೇ ತಿಂಗಳಿನಲ್ಲಿ 2.53 ಕೋಟಿ ವೀವ್ಸ್ ಪಡೆದುಕೊಂಡಿದೆ.
Advertisement
ಚಂದನ್ ಫುಲ್ ಖುಷ್:
ನಮ್ಮ ಟಕಿಲಾ ಸಾಂಗ್ ಯೂಟ್ಯೂಬ್ ನಲ್ಲಿ 2.5 ವೀವ್ಸ್ ಪಡೆದಿಕೊಂಡಿದೆ. ತುಂಬಾ ಖುಷಿಯಾಗಿದೆ. ಒಂದು ಕನ್ನಡ ಸಾಂಗ್ 90 ದಿನಗಳಲ್ಲಿ 2.5 ಕೋಟಿ ವೀವ್ಸ್ ಕಂಡಿದೆ ಅಂದ್ರೆ ಅದು ಕನ್ನಡಿಗರಿಗೆ ಒಂದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಕರ್ನಾಟಕ ಕನ್ನಡಿಗರು, ಕರ್ನಾಟಕ ಬಿಟ್ಟು ಹೊರ ದೇಶದಲ್ಲಿರುವ ಕನ್ನಡಿಗರಿಗೆಲ್ಲಾ ಧನ್ಯವಾದ ಹೇಳೋಕೆ ಇಷ್ಟ ಪಡುತ್ತೇನೆ. ನೀವು ಕೊಟ್ಟಿರುವ ಸಪೋರ್ಟ್ ನನಗೆ ಮತ್ತು ನನ್ನ ತಂಡಕ್ಕೆ ಒಳ್ಳೆ ಎನರ್ಜಿ ಕೊಟ್ಟಿದೆ ಎಂದು ಹೇಳಿದ್ದಾರೆ.
Advertisement
ಚಂದನ್ ಮತ್ತು ಅವರ ತಂಡ ತಮ್ಮ ಅನುಭವವನ್ನು ತುಂಬಾ ಸಂತಸದಿಂದ ಹಂಚಿಕೊಂಡಿದ್ದಾರೆ,