ಬೆಂಗಳೂರು: ಬಿಗ್ಬಾಸ್ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಳೆದವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿ ಹನಿಮೂನ್ಗಾಗಿ ವಿದೇಶಕ್ಕೆ ಹಾರಿದ್ದಾರೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಫೆಬ್ರವರಿ 25, 26 ರಂದು ಮೈಸೂರಿನಲ್ಲಿ ಸಪ್ತಪದಿ ತುಳಿದಿದ್ದರು. ಈಗ ಚಂದನ್ ತನ್ನ ಪತ್ನಿಯೊಂದಿಗೆ ಹನಿಮೂನ್ಗೆ ವಿದೇಶಕ್ಕೆ ಹೋಗಿದ್ದಾರೆ. ಹನಿಮೂನ್ಗೆ ಹೋಗುವ ಮುನ್ನ ಏರ್ಪೋರ್ಟ್ನಲ್ಲಿ ಇಬ್ಬರು ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಆ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ತಾವೂ ಹನಿಮೂನ್ಗೆ ಹೋಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರ್ತಿದ್ದೆ, ಇನ್ಮುಂದೆ ಹೆಂಡ್ತಿ ಇರ್ತಾಳೆ: ಚಂದನ್
Advertisement
Advertisement
ಕಳೆದ ದಿನ ನಿವೇದಿತಾ ಇಬ್ಬರ ಪಾಸ್ಪೋರ್ಟ್ ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಜೊತೆಗೆ ಹನಿಮೂನ್ಗೆ ಯಾವ ವಿದೇಶಕ್ಕೆ ಹೋಗಲಿದ್ದೇವೆ ಎಂಬುದನ್ನು ತಿಳಿಸಿದ್ದರು. ಚಂದನ್ ಮತ್ತು ನಿವೇದಿತಾ ಜೋಡಿ ನೆದರ್ಲ್ಯಾಂಡ್ನ ಆಂಸ್ಟರ್ಡ್ಯಾಮ್ ಹೋಗಿದ್ದು, ಅಲ್ಲಿನ ಸುತ್ತಮುತ್ತಲ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಜಾಗ್ವಾರ್ ಕಾರು ಗಿಫ್ಟ್
Advertisement
Advertisement
ಮದುವೆಯ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಚಂದನ್ ಶೆಟ್ಟಿ, ನಿವೇದಿತಾಗೆ ಹನಿಮೂನ್ಗಾಗಿ ಪ್ಯಾರಿಸ್ಗೆ ಹೋಗಬೇಕು ಎಂಬ ಆಸೆ ಇದೆ. ಹೀಗಾಗಿ ಅಲ್ಲಿಗೆ ಹೋಗುವುದಾಗಿ ತಿಳಿಸಿದ್ದರು. ಈಗ ಬಿಗ್ಬಾಸ್ ಜೋಡಿ ಹನಿಮೂನ್ಗೆ ಆಂಸ್ಟರ್ಡ್ಯಾಮ್ ಗೆ ಹೋಗಿದ್ದಾರೆ.
https://www.instagram.com/p/B9L8peMJMIM/
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಮೈಸೂರಿನ ಹಿನಕಲ್ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ನಲ್ಲಿ ನಡೆದಿದೆ. ಇವರಿಬ್ಬರ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆದಿತ್ತು. ಮದುವೆಯ ಉಡುಗೊರೆಯಾಗಿ ಚಂದನ್ ಪೋಷಕರು ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.