ಪಾತ್ರಗಳಿಗಾಗಿ ಕಲಾವಿದರು ಕಸರತ್ತು ಮಾಡೋದು ಹೊಸದೇನೂ ಅಲ್ಲ. ಆದರೆ ಗಾಯಕ ಕಂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಇದೇ ಮೊದಲ ಬಾರಿಗೆ ಹೀರೋ ಆಗಿ ಅಭಿನಯಿಸಿದ್ದಾರೆ. ಅವರ ಮೊದಲ ಸಿನಿಮಾದ ಪಾತ್ರಕ್ಕಾಗಿ ಬರೋಬ್ಬರಿ 14 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅದು ಇನ್ಸ್ಪೆಕ್ಟರ್ ಪಾತ್ರಕ್ಕಾಗಿ ಎನ್ನುವುದು ವಿಶೇಷ.
ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸುತ್ತಿರುವ ‘ಸೂತ್ರಧಾರಿ’ ಚಿತ್ರದ ‘ಡ್ಯಾಶ್’ ಸಾಂಗ್ ಸಾಕಷ್ಟು ವೀಕ್ಷಣೆಯಾಗಿ ಜನರ ಮನ ಗೆದ್ದಿದೆ. ನಂತರ ಈ (Sutradhari) ಚಿತ್ರಕ್ಕಾಗಿ ವಿಜಯ್ ಈಶ್ವರ್ ಬರೆದಿರುವ ‘ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು’ ಎಂಬ ಹಾಡು ಬಿಡುಗಡೆ ಆಗಿ ಜನರ ಮನಸು ಸೆಳೆದಿದೆ. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ.
ಸೂತ್ರಧಾರಿ ಸಿನಿಮಾ ಕಿರಣ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನಾಯಕಿ ಅಪೂರ್ವ, ನಟರಾದ ಪ್ರಶಾಂತ್ ನಟನ, ಗಿರೀಶ್, ಗಣೇಶ್ ನಾರಾಯಣ್ ಮುಂತಾದವರ ತಾರಾ ಬಳಗವಿದೆ.