ನವದೆಹಲಿ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಟೂರ್ನಿ ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಬ್ಯಾಟ್ಸ್‍ಮನ್ ಆಗಲು ಸುವರ್ಣಾವಕಾಶ ಲಭಿಸಿದೆ.
ಸದ್ಯ ಐಸಿಸಿ ಟೆಸ್ಟ್ ನಂ.1 ಸ್ಥಾನದಲ್ಲಿರುವ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ 1 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ. ಜುಲೈ 22 ರಂದು ಐಸಿಸಿ ಪ್ರಕಟಿಸಿರುವ ಶ್ರೇಯಾಂಕ ಪಟ್ಟಿಯಲ್ಲಿ ಸ್ಮಿತ್ 929 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, 903 ಅಂಕಗಳೊಂದಿಗೆ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ನಂ.1 ಸ್ಥಾನ ಪಡೆಯಲು 26 ಅಂಕಗಳು ಮಾತ್ರ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೆ ನಂ.1 ಸ್ಥಾನ ಪಡೆಯಬಹುದಾಗಿದೆ.
Advertisement
Advertisement
ಶ್ರೇಯಾಂಕ ಪಟ್ಟಿಯಲ್ಲಿರುವ 50 ಟಾಪ್ ಬ್ಯಾಟ್ಸ್ ಮನ್‍ಗಳಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡದ ತಲಾ ಐವರು ಆಟಗಾರರು ಸ್ಥಾನಪಡೆದಿದ್ದಾರೆ. ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ (6), ಕೆಎಲ್ ರಾಹುಲ್(18), ರಹಾನೆ (19), ಮುರಳಿ ವಿಜಯ್(23), ಶಿಖರ್ ಧವನ್ (24)ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಪರ ಜೋ ರೂಟ್ (3), ಅಲಿಸ್ಟರ್ ಕುಕ್ (13), ಜಾನಿ ಬೇರ್‍ಸ್ಟೋವ್ (16), ಬೇನ್ ಸ್ಟೋಕ್ಸ್ (28) ಹಾಗೂ ಮೋಹಿನ್ ಅಲಿ (43)ನೇ ಸ್ಥಾನದಲ್ಲಿದ್ದಾರೆ.
Advertisement
ಕೊಹ್ಲಿ ನಾಯಕತ್ವದಲ್ಲಿ ಕೈಗೊಂಡಿರುವ ಟೆಸ್ಟ್ ಸರಣಿ ಟೀಂ ಇಂಡಿಯಾಗೆ ಮಹತ್ವದಾಗಿದ್ದು, ಇದುವರೆಗೂ ಕೊಹ್ಲಿ ನಾಯಕತ್ವದಲ್ಲಿ ಆಡಿರುವ 53 ಪಂದ್ಯಗಳ ಪೈಕಿ 37 ಪಂದ್ಯಗಳಲ್ಲಿ ತಂಡ ಗೆಲುವು ದಾಖಲಿಸಿದೆ. ವಿಶೇಷವಾಗಿ 2016 ರ ಬಳಿಕ ನಡೆದ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸೋಲುಂಡಿಲ್ಲ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲೂ ಗೆಲುವಿನ ಓಟ ಮುಂದುವರೆಯುತ್ತಾ ಕಾದು ನೋಡಬೇಕಿದೆ.
Advertisement