ಬೆಂಗಳೂರು: ಈದ್ಗಾ ಮೈದಾನ ವಿವಾದ ಇನ್ನೇನು ಅಂತ್ಯ ಕಂಡಿದೆ ಎನ್ನುವಷ್ಟರಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ವಕ್ಫ್ ಬೋರ್ಡ್‍ದ್ದೇ ಆಸ್ತಿ ಎಂದು ದಾಖಲೆಯಲ್ಲಿ ಉಲ್ಲೇಖವಾಗಿರುವುದರ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷ ದಾಖಲೆ ಬಿಡುಗಡೆ ಮಾಡಿದ್ದಾರೆ.
ವಿವಾದಿತ ಈದ್ಗಾ ಮೈದಾನವು ವಕ್ಫ್ ಬೋರ್ಡ್‍ದ್ದೇ ಆಸ್ತಿ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಅದಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಬಿಬಿಎಂಪಿ ಅವರು ಕಳೆದುಹೋದ ಆಟದ ಮೈದಾನವನ್ನು ಹುಡುಕಲಿ. ಅದು ಬಿಟ್ಟು ನಮ್ಮ ವಕ್ಫ್ ಆಸ್ತಿಯನ್ನು ಆಟದ ಮೈದಾನ ಎನ್ನುವುದು ಬೇಡ ಎಂದಿದ್ದಾರೆ.
ಮೈಸೂರು ಸಂಸ್ಥಾನದ ಆಡಳಿತ ಕಾಲದಲ್ಲಿ ಈ ಸ್ವತ್ತಿನ ಮಾಲೀಕರು ಕಾರ್ಪೋರೇಷನ್ ಎಂದು ಉಲ್ಲೇಖವಾಗಿದೆ. ಇನ್ನೊಂದಡೆ ಬಿಬಿಎಂಪಿ ದಾಖಲೆಯಲ್ಲಿ ಬಿಬಿಎಂಪಿ ಆಟದ ಮೈದಾನ ಅಂತ ಉಲ್ಲೇಖವಾಗಿದೆ. ವಕ್ಫ್ ಬೋರ್ಡ್ ದಾಖಲೆಯಲ್ಲೂ ವಕ್ಫ್‌ಗೆ ಸೇರಿದ್ದು ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಭಾರಿ ಗೊಂದಲ ಸೃಷ್ಟಿಯಾಗಿದ್ದು, ಮತ್ತೊಂದು ಆಯಾಮಕ್ಕೆ ಈ ವಿವಾದ ತಲುಪುವ ಲಕ್ಷಣಗಳು ಕಾಣಿಸುತ್ತಿವೆ. ಇದನ್ನೂ ಓದಿ: ಈದ್ಗಾ ಮೈದಾನ ಆಟದ ಮೈದಾನ, ಬಿಬಿಎಂಪಿ ಆಸ್ತಿ: ಹರೀಶ್ ಕುಮಾರ್
ಈಗಾಗಲೇ ಈದ್ಗಾ ಮೈದಾನ ವಿವಾದ ವಿಚಾರವಾಗಿ ಸಾಲು ಸಾಲು ಸಂಘಟನೆಗಳಿಂದ ಅರ್ಜಿ ಹಾಕಲು ಸಿದ್ಧತೆ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಆಗಸ್ಟ್ 15ರಂದು ಕಾರ್ಯಕ್ರಮಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿತ್ತು.
ಅಷ್ಟೇ ಅಲ್ಲದೇ ಸೋಮವಾರ ಈ ವಿಚಾರ ದೊಡ್ಡದಾಗುತ್ತಿದ್ದಂತೆ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್, ಚಾಮರಾಜಪೇಟೆ ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಬಿಬಿಎಂಪಿ ಆಸ್ತಿ ಆಗಿದೆ. ಕೋರ್ಟ್ ನಿರ್ದೇಶನದ ಪ್ರಕಾರ ವರ್ಷದಲ್ಲಿ 2 ಬಾರಿ ಪ್ರಾರ್ಥನೆಗೆ ಅವಕಾಶ ಕೊಡಲಾಗುತ್ತಿದೆ. ಕೋರ್ಟ್ ನೀಡಿರುವ 2 ಅವಧಿ ಬಿಟ್ಟು ಅವಕಾಶ ಕೇಳಿದ್ದರೆ ಬೇರೆ ಚಟುವಟಿಕೆಗೆ ಅವಕಾಶ ಕೊಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ- ಇಕ್ಕಟ್ಟಿಗೆ ಸಿಲುಕಿದ ಚಾಮರಾಜಪೇಟೆ ಪೊಲೀಸರು
ಆದರೆ ಇದೀಗ ಈದ್ಗಾ ವಿವಾದದಲ್ಲಿ ಬಿಬಿಎಂಪಿ ಯೂಟರ್ನ್ ಹೊಡೆದಿದೆ. ಈ ಬಗ್ಗೆ ಜಂಟಿ ಆಯುಕ್ತ ಶಿವಸ್ವಾಮಿ ಮಾತನಾಡಿ, ಕಾರ್ಯಕ್ರಮ ನಡೆಸಬಾರದೆಂದು ಸುಪ್ರೀಂ ಆದೇಶ ಇದೆ. ವಕ್ಫ್ ಬೋರ್ಡ್ ಏನ್ ಹೇಳ್ತಾರೆ ಪೇಪರ್ ಕೊಡಲಿ ಪರಿಶೀಲನೆ ಮಾಡಲಾಗುತ್ತದೆ. ಇದಾದ ಮೇಲೆ ಮತ್ತೆ ಬಿಬಿಎಂಪಿ ಅಂತಿಮ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು, ಇದು ಆಟದ ಮೈದಾನ ಅಂತ ಬಿಬಿಎಂಪಿಯೇ ಹೇಳಿದ ಮೇಲೆ ಮತ್ತೆ ಪರಿಶೀಲನೆ ಮಾಡುವುದು ಏನಿದೆ. ವಕ್ಪ್ ಬೋರ್ಡ್ ಜೊತೆ ಯಾಕೆ ಪರಿಶೀಲನೆ ನಡೆಸಬೇಕು ಎಂದು ಬಿಬಿಎಂಪಿ ವಿರುದ್ಧ ಕಿಡಿಕಾರಿದೆ. ಇದನ್ನೂ ಓದಿ: ಮಸೀದಿ ಆಯ್ತು ಈಗ ಈದ್ಗಾ ಮೈದಾನ – ಏನಿದು ವಿವಾದ? ಹಿಂದೂಗಳ ವಾದವೇನು? ಬಿಬಿಎಂಪಿ ದಾಖಲೆಯಲ್ಲಿ ಏನಿದೆ?