ದುಬೈ: ಬಿಸಿಸಿಐ (BCCI) ನಿರ್ಬಂಧದ ಹೊರತಾಗಿಯೂ ಕೊಹ್ಲಿ (Virat Kohli) ಅವರು ತಮಗೆ ಬೇಕಾದ ಆಹಾರ ಸೇವಿಸಲು ವಿಶಿಷ್ಟ ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಮುಗಿದ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕೆಲವು ಚಟುವಟಿಕೆಗಳನ್ನು ನಿರ್ಬಂಧಿಸುವ 10 ಅಂಶಗಳ ಆದೇಶವನ್ನು ಬಿಸಿಸಿಐ ಹೊರಡಿಸಿದೆ.
Advertisement
ಆಟಗಾರರು ತಮ್ಮದೇ ಆದ ವೈಯಕ್ತಿಕ ಅಡುಗೆಯವರು, ಸ್ಟೈಲಿಸ್ಟ್‌ಗಳು ಮತ್ತು ಸಿಬ್ಬಂದಿಯನ್ನು ವಿದೇಶ ಪ್ರವಾಸಗಳಿಗೆ ಕರೆತರುವಂತಿಲ್ಲ ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿದೆ. ಬಿಸಿಸಿಐ ಈ ಖಡಕ್ ಸೂಚನೆಗಳು ಕೊಹ್ಲಿ ಮೇಲೆ ಬಿದ್ದಿದೆ.
Advertisement
ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಆಡಲು ದುಬೈಯಲ್ಲಿರುವ ಕೊಹ್ಲಿ ತಮ್ಮ ಬಾಣಸಿಗರನ್ನು ಜತೆಗೊಯ್ಯಲಾಗದೇ ತನ್ನಿಷ್ಟದ ಆಹಾರವನ್ನು ಪಡೆಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಯಾದರೂ ಕೊಹ್ಲಿ ಪರಿಹಾರ ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಮಂಧಾನ ಮ್ಯಾಜಿಕ್ ಬ್ಯಾಟಿಂಗ್ – ಆರ್‌ಸಿಬಿಗೆ 8 ವಿಕೆಟ್‌ಗಳ ಅದ್ಧೂರಿ ಜಯ
Advertisement
ತನಗೆ ಬೇಕಾಗಿರುವ ಆಹಾರದ ಬಗ್ಗೆ ಸ್ಥಳೀಯ ತಂಡದ ವ್ಯವಸ್ಥಾಪಕರೊಂದಿಗೆ ಮಾತನಾಡಿದ್ದಾರೆ. ಈಗ ಕೊಹ್ಲಿಗಾಗಿ ಸ್ಥಳೀಯ ಹೋಟೆಲಿನಲ್ಲಿ ಆಹಾರ ಸಿದ್ಧಪಡಿಸಿ ಮೈದಾನಕ್ಕೆ ಕಳುಹಿಸಿಕೊಡಲಾಗಿದೆ. ಉಳಿದ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಮುಗಿಸಿ ಕಿಟ್ ಪ್ಯಾಕ್ ಮಾಡುತ್ತಿದ್ದರೆ ಕೊಹ್ಲಿ ಆಹಾರ ಸೇವಿಸುತ್ತಿದ್ದರು ಎಂದು ವರದಿಯಾಗಿದೆ.
Advertisement
— BCCI (@BCCI) February 16, 2025
ಆಟಗಾರರು ಇನ್ನು ಮುಂದೆ ಬಿಸಿಸಿಐ ಅನುಮೋದಿಸದ ಹೊರತು ಪ್ರವಾಸಗಳಲ್ಲಿ ಬಾಣಸಿಗರು, ಭದ್ರತಾ ಸಿಬ್ಬಂದಿ ಅಥವಾ ಸಹಾಯಕರಂತಹ ವೈಯಕ್ತಿಕ ಸಿಬ್ಬಂದಿಯನ್ನು ಕರೆತರಲು ಸಾಧ್ಯವಿಲ್ಲ. ಎಲ್ಲರೂ ನಿಗದಿಪಡಿಸಿದ ಹೊಸ ನಿಯಮಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟವಾಗಿ ಸೂಚಿಸಿದೆ.
ಕೋಚ್ ಗೌತಮ್ ಗಂಭೀರ್ ಅವರು ವೈಯಕ್ತಿಕ ಸಹಾಯಕರೊಂದಿಗೆ ಟೂರ್ನಿಗೆ ಆಗಮಿಸಿದ್ದರೂ ಸಹಾಯಕರು ಬೇರೆ ಹೋಟೆಲಿನಲ್ಲಿ ತಂಗುವಂತೆ ಸೂಚಿಸಲಾಗಿದೆ.