ದುಬೈ: ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯದ ಆರಂಭಕ್ಕೂ ಮೊದಲೇ ಭಾರತ (Team India) ತಂಡಕ್ಕೆ ಆಘಾತ ಎದುರಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ.
ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯ (Hardik Pandya) ಅವರು ಪಂತ್‌ಗೆ ಬಾಲ್ ಎಸೆಯತ್ತಿದ್ದರು. ಈ ವೇಳೆ ಬಾಲ್ ಪಂತ್ ಅವರ ಎಡ ಮೊಣಕಾಲಿಗೆ ಬಡಿದಿದೆ. ಪೆಟ್ಟು ಬಿದ್ದ ನಂತರ ಪಂತ್ ಕುಂಟುತ್ತಾ ನಡೆದಿದ್ದಾರೆ.
Advertisement
Rishabh Pant got hit on his knees 👀
– hope this is not serious 🙏 pic.twitter.com/Nz4e93Jf1b
— Nikhil (@TheCric8Boy) February 16, 2025
Advertisement
ವೈದ್ಯಕೀಯ ಆರೈಕೆಯ ನಂತರ ಪಂತ್ ಮೊಣಕಾಲಿನ ಪಟ್ಟಿಯೊಂದಿಗೆ ಅಭ್ಯಾಸವನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ. 2022 ರಲ್ಲಿ ರಿಷಭ್ ಪಂತ್ ಅವರ ಕಾರು ಭೀಕರ ಅಪಘಾತವಾಗಿದ್ದು. ಈ ಸಂದರ್ಭದಲ್ಲಿ ಎಡ ಮೊಣಕಾಲಿಗೆ ಬಲವಾದ ಏಟು ಬಿದ್ದಿತ್ತು. ಇದನ್ನೂ ಓದಿ: WPL ನಿಂದ ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕ ಹೊರಕ್ಕೆ?
Advertisement
ಪಂತ್ ತಮ್ಮ ಮೊದಲ ಚಾಂಪಿಯನ್ಸ್ ಟ್ರೋಫಿಯನ್ನು ಆಡುತ್ತಿದ್ದಾರೆ. ಭಾರತವು ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸಲಿದೆ. ಫೆಬ್ರವರಿ 23 ರಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
Advertisement
ಭಾರತವು ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. 2002 ರಲ್ಲಿ ಶ್ರೀಲಂಕಾದ ಜೊತೆ ಜಂಟಿಯಾಗಿ ಜಯಗಳಿಸಿದ್ದರೆ 2013 ರಲ್ಲಿ ಆತಿಥೇಯ ಇಂಗ್ಲೆಂಡ್ ಅನ್ನು 5 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.