ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರಿಕೆಟ್ ಟೂರ್ನಿಯಲ್ಲಿಂದು ಟೀಂ ಇಂಡಿಯಾ (Team India) ತನ್ನ ಮೊದಲ ಪಂದ್ಯ ಆಡಲಿದೆ. ಬಾಂಗ್ಲಾದೇಶ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಮೆನ್ ಇನ್ ಬ್ಲ್ಯೂ, ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ.
Advertisement
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಇಂದು ತನ್ನ ಮೊದಲ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಬಾಂಗ್ಲಾದೇಶ (Bangladesh)ವಿರುದ್ಧ ಮೊದಲ ಪಂದ್ಯವಾಡಲಿರುವ ರೋಹಿತ್ ಪಡೆ, 2025ರ ಐಸಿಸಿ ಟೂರ್ನಿಯಲ್ಲಿ ಶುಭಾರಂಭದ ಕಾತುರತೆಯಲ್ಲಿದೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಗೆದ್ದು ಅದೇ ಜೋಶ್‌ನಲ್ಲಿ, ಚಾಂಪಿಯನ್ಸ್ ಟ್ರೋಫಿಗೆ ತೆರಳಿರೋ ಭಾರತ ತಂಡ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದುವರೆಗೂ ಭಾರತ ಮತ್ತು ಬಾಂಗ್ಲಾ ನಡುವೆ 41 ಪಂದ್ಯಗಳು ನಡೆದಿದ್ದು 32 ಪಂದ್ಯಗಳಲ್ಲಿ ಭಾರತ, 8ರಲ್ಲಿ ಬಾಂಗ್ಲಾ ಗೆಲುವು ಸಾಧಿಸಿದ್ದರೆ, 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.
Advertisement
Advertisement
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್ ಸಾಬೀತುಪಡಿಸಿದ್ದರು. ಅದೇ ರೀತಿ ಸರಣಿಯ 3ನೇ ಪಂದ್ಯದಲ್ಲಿ ರನ್ ಮಿಷಿನ್ ಕೊಹ್ಲಿ ಕೂಡ ಅರ್ಧ ಶತಕದೊಂದಿಗೆ ಫಾರ್ಮ್ ಕಂಡುಕೊಂಡಿದ್ರು. ಇದನ್ನೂ ಓದಿ: Champions Trophy | ಯಾವ ವರ್ಷ – ಯಾರು ಚಾಂಪಿಯನ್ಸ್? – ಭಾರತ ಕೊನೇ ಬಾರಿ ಟ್ರೋಫಿ ಗೆದ್ದಿದ್ದು ಯಾವಾಗ?
Advertisement
ಇನ್ನೂ ಭಾರತ ತಂಡದ ಬ್ಯಾಟಿಂಗ್ ನಲ್ಲಿ ಶುಭಮನ್ ಗಿಲ್ ಅಗ್ರ ಕ್ರಮಾಂಕದಲ್ಲಿ, ಕೆ.ಎಲ್ ರಾಹುಲ್, ಶ್ರೇಯಸ್ ಐಯರ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ಇತ್ತ ಬೌಲಿಂಗ್‌ನಲ್ಲಿ ಬುಮ್ರಾ ಅನುಪಸ್ಥಿತಿ ಕೊಂಚ ಕಾಡುವ ಸಾಧ್ಯತೆ ಇದೆ. ಈಗಷ್ಟೇ ಗಾಯದ ಸಮಸ್ಯೆಯಿಂದ ವಾಪಸ್ ಆಗಿರೋ ಮೊಹಮ್ಮದ್ ಶಮಿ ಬೌಲಿಂಗ್ ಪಡೆ ಮುನ್ನಡಸಲಿದ್ದಾರೆ. ಶಮಿ ಜೊತೆ ಅರ್ಷ್‌ದೀಪ್ ಸಿಂಗ್ ಜೊತೆಯಾದ್ರೆ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ ಕಮಾಲ್ ಮಾಡುವ ಸಾಧ್ಯತೆ ಇದೆ. ಜೊತೆಗೆ ಅಲ್ರೌಂಡರ್ ವಿಭಾಗದಲ್ಲಿ ಜಡ್ಡು, ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ನೆರವಾಗಲಿದ್ದಾರೆ.
ಇತ್ತ ಬಾಂಗ್ಲಾದೇಶ ತಂಡ ಕೂಡ ಬಲಿಷ್ಠವಾಗಿಯೇ ಇದೆ. ಐಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಉತ್ತಮ ಸಾಧನೆ ಇಲ್ಲದಿದ್ದರೂ, ತಂಡವನ್ನ ಕಡೆಗಣಿಸುವಂತಿಲ್ಲ. ಹಿರಿಯ ಮತ್ತು ಯುವ ಆಟಗಾರರ ಪಡೆಯೊಂದಿಗೆ ಟೂರ್ನಿ ಶುಭಾರಂಭಕ್ಕೆ ಬಾಂಗ್ಲಾ ಪಡೆ ಕೂಡ ಕಾತರೆಯಿಂದ ಎದುರು ನೋಡುತ್ತಿದೆ. ಇದನ್ನೂ ಓದಿ: Ind vs Pak ಬ್ಲಾಕ್‌ಬಸ್ಟರ್ ಪಂದ್ಯದ VIP ಟಿಕೆಟ್ 3.50 ಕೋಟಿಗೆ ಮಾರಿಕೊಂಡ ಪಿಸಿಬಿ ಅಧ್ಯಕ್ಷ
ದಾಖಲೆಗಳ ಸನಿಹದಲ್ಲಿ ಕೊಹ್ಲಿ, ರೋಹಿತ್:
ಏಕದಿನ ಪಂದ್ಯದಲ್ಲಿ ಕೊಹ್ಲಿ 14,000 ರನ್‌ಗಳ ಗಡಿ ಮುಟ್ಟಲು, 37 ರನ್‌ಗಳಷ್ಟೇ ಬಾಕಿ ಇದೆ. ಈ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 3ನೇ, ಭಾರತದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಅಲ್ಲದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಂಡೀಸ್‌ನ ಕ್ರಿಸ್ ಗೇಲ್ ದಾಖಲೆ ಮುರಿದು ಅತಿ ಹೆಚ್ಚು ರನ್ ಹಾಗೂ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧ ಶತಕ ದಾಖಲು ಮಾಡಿರೋ ರಾಹುಲ್ ದ್ರಾವಿಡ್ ದಾಖಲೆ ಮುರಿಯುವ ಅವಕಾಶ ಕೂಡ ಇದೆ. ಇದೇ ಕಾರಣಕ್ಕೆ ಟ್ರೋಫಿ ಜೊತೆಗೆ ದಾಖಲೆ ನಿರ್ಮಾಣಕ್ಕೆ ಕೊಹ್ಲಿಗೆ ಟೂರ್ನಿ ಮಹತ್ವದ್ದಾಗಲಿದೆ. ಇದನ್ನೂ ಓದಿ: ಲಾಥಮ್ – ಯಂಗ್ ಶತಕಗಳ ಅಬ್ಬರಕ್ಕೆ ಪಾಕ್ ಪಂಚರ್; ನ್ಯೂಜಿಲೆಂಡ್‌ಗೆ 60 ರನ್‌ಗಳ ಭರ್ಜರಿ ಜಯ