ದುಬೈ: ಅರ್ಧಶತಕ ಸಿಡಿಸಿ ಟೀಂ ಇಂಡಿಯಾವನ್ನು(Team India) ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ತಲುಪಿಸಿದ ವಿರಾಟ್ ಕೊಹ್ಲಿ (Virat Kohli) ಸಚಿನ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು (World Record) ಮುರಿದಿದ್ದಾರೆ.
ಇಂದು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 74ನೇ ಅರ್ಧಶತಕ ಸಿಡಿಸಿದರೆ ಐಸಿಸಿ ಆಯೋಜಿಸಿದ ಟೂರ್ನಿಯಲ್ಲಿ 24ನೇ ಫಿಫ್ಟಿ ಹೊಡೆದರು. ಈ ಮೂಲಕ ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಫೈನಲಿಗೆ ಭಾರತ – ದಾಖಲೆ ಬರೆದ ರೋಹಿತ್ ಶರ್ಮಾ
Advertisement
Virat Kohli steadied the India chase in a crucial stand with Shreyas Iyer 👌
Watch live now in India on @StarSportsIndia
Head here for broadcast details in other territories ➡️ https://t.co/S0poKnxpTX pic.twitter.com/4kbuMuoO80
— ICC (@ICC) March 4, 2025
Advertisement
ಇಲ್ಲಿಯವರೆಗೆ ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಖ್ಯಾತಿಗೆ ಸಚಿನ್ (Sachin Tendulkar) ಪಾತ್ರವಾಗಿದ್ದರು. ತೆಂಡೂಲ್ಕರ್ 58 ಇನ್ನಿಂಗ್ಸ್‌ಗಳಿಂದ 23 ಅರ್ಧಶತಕ ಸಿಡಿಸಿದ್ದರು.
Advertisement
ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಟಾಪ್ ಬ್ಯಾಟ್ಸ್‌ಮನ್‌ಗಳು
24 – ವಿರಾಟ್ ಕೊಹ್ಲಿ (53 ಇನ್ನಿಂಗ್ಸ್)
23 – ಸಚಿನ್ ತೆಂಡೂಲ್ಕರ್ (58 ಇನ್ನಿಂಗ್ಸ್)
18 – ರೋಹಿತ್ ಶರ್ಮಾ (42 ಇನ್ನಿಂಗ್ಸ್)
17 – ಕುಮಾರ್ ಸಂಗಕ್ಕಾರ (56 ಇನ್ನಿಂಗ್ಸ್)
16 – ರಿಕಿ ಪಾಂಟಿಂಗ್ (60 ಇನ್ನಿಂಗ್ಸ್)
Advertisement
ಇಂದಿನ ಪಂದ್ಯದಲ್ಲಿ ಕೊಹ್ಲಿ 84 ರನ್ (98 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಮೂರನೇ ವಿಕೆಟಿಗೆ ಶ್ರೇಯಸ್ ಅಯ್ಯರ್ ಜೊತೆ 111 ಎಸೆತಗಳಲ್ಲಿ 91 ರನ ಜೊತೆಯಾಟವಾಡಿದ್ದ ಕೊಹ್ಲಿ 4ನೇ ವಿಕೆಟಿಗೆ ಅಕ್ಷರ್ ಪಟೇಲ್ ಜೊತೆ 52 ಎಸೆತಗಳಲ್ಲಿ 44 ರನ್ ಜೊತೆಯಾಟವಾಡಿದ್ದರು. ಐದನೇ ವಿಕೆಟಿಗೆ ಕೆಎಲ್ ರಾಹುಲ್ ಜೊತೆ 46 ಎಸೆತಗಳಲ್ಲಿ 47 ರನ್ ಪೇರಿಸಿದ್ದರು.
ಅತ್ಯುತ್ತಮ ಆಟವಾಡಿದ್ದ ಕೊಹ್ಲಿ ಅವರಿಗೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೊದಲು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಅಜೇಯ 100 ರನ್ ಹೊಡೆದಿದ್ದಕ್ಕೆ ಕೊಹ್ಲಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿತ್ತು.