ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ನಂದನವನ ನೀರಿನಿಂದ ಆವೃತವಾಗಿದ್ದರೆ, ಮಜ್ಜನ ಬಾವಿಯೂ ಮುಳುಗಡೆಯಾಗಿದೆ.
ನೀರಿನ ರಭಸಕ್ಕೆ ಜಮೀನಿನ ಕಲ್ಲುಕಟ್ಟೆಗಳು ಒಡೆದು ಹೋಗಿದೆ. ಅಲ್ಲದೇ ಮಾದಪ್ಪನಿಗೆ ನಿತ್ಯ ತ್ರಿಕಾಲ ಪೂಜೆ ನೆರವೇರಿಸಲು ಆಗ್ರೋದಕವನ್ನು ತರುವ ನಂದನವನದ ಮಜ್ಜನ ಬಾವಿ ಸಂಪೂರ್ಣ ನೀರಿನಿಂದ ಆವೃತವಾಗಿದ್ದರಿಂದ ಅರ್ಚಕರು ಮತ್ತೊಂದು ಬಾವಿಯಿಂದ ಜಲವನ್ನು ತಂದು ಶ್ರಾವಣ ಮಾಸದ ಪೂಜೆಯನ್ನು ನೆರವೇರಿಸಿದ್ದಾರೆ. ಇದನ್ನೂ ಓದಿ: ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಕಾಲು ಮುರಿದುಕೊಂಡ ಶಾಸಕ ಎಂ.ವೈ ಪಾಟೀಲ್
Advertisement
Advertisement
ಇತ್ತ ಕಾಮಗಾರಿ ಪ್ರಗತಿಯಲ್ಲಿದ್ದ ದೊಡ್ಡಕೆರೆ ಕಲ್ಯಾಣಿ ಕಟ್ಟೆಗಳೂ ಕುಸಿದಿವೆ. ತಂಬಡಿಗೇರಿಯ ಚರಂಡಿಯ ಕೊಳಚೆ ನೀರು ನಂದನವನಕ್ಕೆ ನುಗ್ಗಿದ್ದು, ಪರಿಣಾಮ ಮಜ್ಜನ ಬಾವಿಯ ನೀರು ಕಲುಷಿತಗೊಂಡಿದೆ. ಇದನ್ನೂ ಓದಿ: ಸಪ್ತಪದಿ ತುಳಿದ ರಷ್ಯಾ ಯುವಕ, ಉಕ್ರೇನ್ ಯುವತಿ – ಹಿಂದೂ ಸಂಪ್ರದಾಯದಂತೆ ಭಾರತದಲ್ಲಿ ವಿವಾಹ