ಹುಬ್ಬಳ್ಳಿ: ಸ್ನಾನ ಮಾಡುವಾಗ ಬಾತ್‍ರೂಮ್‍ನಲ್ಲಿ ಕಾಲು ಜಾರಿ ಬಿದ್ದು ಶಾಸಕರೊಬ್ಬರು ಕಾಲು ಮುರಿದುಕೊಂಡಿರುವ ಹುಬ್ಬಳ್ಳಿಯಲ್ಲಿ ನಡದಿದೆ.
ಕಲಬುರಗಿಯ ಅಫಜಲಪುರ ಶಾಸಕ ಎಮ್.ವೈ ಪಾಟೀಲ್ ಕಾಲು ಮುರಿದುಕೊಂಡರು. ನಿನ್ನೆ ಸಿದ್ದರಾಮೋತ್ಸವದಲ್ಲಿ ಪಾಲ್ಗೊಂಡಿದ್ದ ಎಂ.ವೈ.ಪಾಟೀಲ್, ವಾಪಸ್ಸು ಊರಿಗೆ ತೆರಳಲು ತಡವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸರ್ಕಿಟ್ ಹೌಸ್‍ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಸ್ನಾನ ಮಾಡಲು ಹೋದಾಗ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಇದನ್ನೂ ಓದಿ: 750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್
Advertisement
Advertisement
ಕೂಡಲೇ ಜೊತೆಗಿದ್ದ ಅವರ ಆಪ್ತರು ಅಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಶಾಸಕ ಎಂ.ವೈ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಭೂ ಹಗರಣ ಪ್ರಕರಣ – ಸಂಜಯ್ ರಾವತ್ ಪತ್ನಿಗೆ ಇಡಿ ಸಮನ್ಸ್