ಚಾಮರಾಜನಗರ: ಕೊರೊನಾ ಭೀತಿ ಶುರುವಾದ ನಂತರ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಸ್ಕ್‌ಗಳ ಕೊರತೆ ಎದುರಾಗಿದೆ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲಿ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಮಾಸ್ಕ್‌ಗಳ ದರವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಾಸ್ಕ್‌ಗಳ ಅವಶ್ಯಕತೆಯನ್ನರಿತ ಚಾಮರಾಜನಗರ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘವೊಂದು ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಆರಂಭಿಸಿದೆ.
Advertisement
ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ಭೀತಿಯಿಂದ ಜನರು ಮಾಸ್ಕ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಸ್ಕ್‌ಗಳ ಕೊರತೆ ಹೆಚ್ಚಾಗಿದೆ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲಿ ಬೇಡಿಕೆಗೆ ತಕ್ಕಂತೆ ಮಾಸ್ಕ್‌ಗಳು ಲಭ್ಯವಾಗುತ್ತಿಲ್ಲ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್‌ಗಳ ದರವೂ ದುಪ್ಪಾಟ್ಟಾಗುತ್ತಿದೆ. ಈ ಹಿನ್ನೆಲೆ ಮಾಸ್ಕ್‌ಗಳ ಅವಶ್ಯಕತೆಯನ್ನು ಅರಿತ ಚಾಮರಾಜನಗರ ತಾಲೂಕಿನ ಬೂದಂಬಳ್ಳಿ ಮಹಿಳಾ ಸ್ವಸಹಾಯ ಸಂಘವೊಂದು ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸಿ, ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಆರಂಭಿಸಿದೆ.
Advertisement
Advertisement
ಜಿಲ್ಲಾ ಪಂಚಾಯ್ತಿಯ ಎನ್‌ಆರ್‌ಎಲ್‌ಎಂ ಯೋಜನೆಯಡಿ ಭುವನೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಸಾಲ ಸೌಲಭ್ಯ ಪಡೆದು, ಹೊಲಿಗೆ ಯಂತ್ರ ಖರೀದಿಸಿ ಸ್ವ ಉದ್ಯೋಗ ಕೈಗೊಂಡಿದ್ದಾರೆ. ಮಾಸ್ಕ್‌ಗಳ ಅವಶ್ಯಕತೆ ಅರಿತು ಕಡಿಮೆ ದರದಲ್ಲಿ ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.
Advertisement
ಸಾಮಾನ್ಯರಿಗೂ ಮಾಸ್ಕ್ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಮಹಿಳೆಯರು ಮಾಸ್ಕ್ ತಯಾರಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದ ಉತ್ತಮ ಗುಣಮಟ್ಟದ ಹತ್ತಿ ಬಟ್ಟೆ ಉಪಯೋಗಿಸಿ, ಬಳಸಲು ಸುಲಭವಾಗುವ ರೀತಿಯ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.
ಈ ಮಾಸ್ಕ್‌ಗಳು ಪುನರ್ ಬಳಸಬಹುದಾಗಿದ್ದು, ಬೆಲೆಯು ಕೂಡ ಕಡಿಮೆ ಇದೆ. ಇಲ್ಲಿ ಮಾಸ್ಕ್‌ಗಳು ಕಡಿಮೆ ಬೆಲೆಗೆ ದೊರೆಯುವುದನ್ನು ಮನಗಂಡು ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮೆಡಿಕಲ್ ಶಾಪ್‍ಗಳಿಂದಲೂ ಬೇಡಿಕೆ ಬಂದಿದ್ದು, ಬೇಡಿಕೆಗೆ ಅನುಗುಣವಾಗಿ ಮಾಸ್ಕ್‌ಗಳನ್ನು ಪೂರೈಸಲು ಮಹಿಳೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ.