ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಬೈರನತ್ತ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಮತ್ತು ಗ್ರಾಮಸ್ಥರು ಕೆಲಸ ಕಾರ್ಯಗಳನ್ನು ಬಿಟ್ಟು ನೀರಿನ ಸಂಗ್ರಹಣವೇ ತಲೆ ನೋವಾಗಿ ಪರಿಣಮಿಸಿದೆ ಎಂದು ಅಕ್ರೋಶವನ್ನು ಹೊರಹಾಕಿದ್ದಾರೆ.
ಅತ್ತ ಕುಲಿಗೂ ಹೋಗಲಾಗದೇ, ಇತ್ತ ಕುಡಿಯುವ ನೀರು ಸಿಗದೇ ತೊಂಬೆಗಳ ಮುಂದೆ ಮಹಿಳೆಯರ ಅಳಲು ತೋಡಿಕೊಂಡಿದ್ದಾರೆ. ಮಹಿಳೆಯರು ಕೂಲಿ ಕೆಲಸವನ್ನು ಅರಸಿ ಹೋಗಬೇಕಾದರೆ ಮನೆಗಳಿಗೆ ಕುಡಿಯಲು ನೀರನ್ನು ಸಂಗ್ರಹಿಸಿ ಹೋಗಬೇಕಾಗಿದೆ.
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿಯವರೆಗೂ ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಿರುವುದಿಲ್ಲ. ಹೀಗಾಗಿ, ಟ್ಯಾಂಕರ್‌ನಲ್ಲಿ ನೀಡುತ್ತಿರುವ ನೀರು ಸಾಲದು.
ಕೂಲಿಗೆ ಹೋಗಿ ಬರುವಷ್ಟರಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಮಹಿಳೆಯರು ಸಂಗ್ರಹಿಸಲು ದಿನನಿತ್ಯ ಗ್ರಾಮದಲ್ಲಿರುವ ತೊಂಬೆಗಳ ಮುಂದೆ ಮತ್ತು ಟ್ಯಾಂಕರ್ ಬರುವುದನ್ನೇ ಕಾಯಬೇಕಾಗಿದೆ. ಹೆಚ್ಚುವರಿ ಟ್ಯಾಂಕರ್ ನೀರಿನ ಸರಬರಾಜು ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
