ಚಾಮರಾಜನಗರ: ಅನರ್ಹರು ಜನತಾ ನ್ಯಾಯಾಲಯದಲ್ಲಿ ಗೆದ್ದು ಅರ್ಹರಾಗಿದ್ದಾರೆ. ಈ 10 ಜನ ಕೂಡ ಸಿದ್ದರಾಮಯ್ಯ ಬೆಂಬಲಿಗರು. ಹೀಗಾಗಿ ಅವರನ್ನು ಒಳ್ಳೆಯ ಕೆಲಸ ಮಾಡಿ ಅಂತ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಬಿಎಸ್‍ಪಿ ಉಚ್ಛಾಟಿತ ಶಾಸಕ ಎನ್ ಮಹೇಶ್ ಹೇಳಿದ್ದಾರೆ.
ಚಾಮರಾಜನಗರದ ಯಳಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಹಳ ಪ್ರಬುದ್ಧ ಉಳ್ಳವರು, ಯಾಕೆ ಈ ರೀತಿ ಮಾತನಾಡ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಮಾರ್ಗದರ್ಶನ ಮಾಡಬೇಕು. ಡಿಸ್ಕರೇಜ್ ಮಾಡುವ ಕೆಲಸ ಬೇಡ ಎಂದು ಕಿವಿ ಮಾತು ಹೇಳಿದ್ರು.
Advertisement
Advertisement
ಶಾಸಕರು ಹೇಗೆ ಗೆದ್ದಿದ್ದಾರೆಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಸಿದ ಮಹೇಶ್, ಈ ಮಾತು ಎಲ್ಲಿಗೋ ಎಳೆದುಕೊಂಡು ಹೋಗುತ್ತೆ. ಈ ಮಾತು ಎಲ್ಲರಿಗೂ ಒಳಗೊಳ್ಳುತ್ತೆ ಅನ್ನೋ ಮೂಲಕ ಸಿದ್ದರಾಮಯ್ಯ ಅವರ ಕಾಲೆಳೆದರು. ಇದನ್ನೂ ಓದಿ: ನೂತನ ಸಚಿವರಿಗೆ ಒಳ್ಳೆಯದಾಗಲಿ, ಸಿಎಂಗೆ ಕೈಕಾಲು ಕಟ್ಟಿ ಹಾಕಿ ಕೀರಿಟ ಇಟ್ಟಿದ್ದಾರೆ: ಸಿದ್ದರಾಮಯ್ಯ
Advertisement
ಗೆದ್ದಿರುವ ಶಾಸಕರನ್ನು ಮಂತ್ರಿ ಮಾಡಿದ್ದಾರೆ. ಮಹೇಶ್ ಕುಮಟಳ್ಳಿ ಸೇರಿದಂತೆ ಉಳಿದವರಿಗೆ ಮುಂದೆ ಸ್ಥಾನಮಾನ ಸಿಗುತ್ತೆ. ಯಡಿಯೂರಪ್ಪ ನಂಬಿಕೆ ಉಳಿಸಿಕೊಳ್ಳುವ ಮನುಷ್ಯ. ನನಗೂ ಕೂಡ ಅವರ ಮೇಲೆ ನಂಬಿಕೆಯಿದೆ. ಬಾಯಲ್ಲಿ ಒಂದು ಬಾರಿ ಹೇಳಿದ್ರೆ ಮಾಡೇ ಮಾಡ್ತಾರೆ. ಯಡಿಯೂರಪ್ಪ ಬಳಿ ನನ್ನದೇನೂ ಡಿಮ್ಯಾಂಡ್ ಇಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದ್ದೇನೆ ಎಂದರು.
Advertisement
ಸಂಪುಟದಲ್ಲಿ ಲಿಂಗಾಯತರು, ಒಕ್ಕಲಿಗರಿಗೆ ಪ್ರಾಶಸ್ತ್ಯ ವಿಚಾರದ ಕುರಿತು ಮಾತನಾಡಿ, ಎಲ್ಲಾ ಸಮುದಾಯದವರು ಕೂಡ ಸಂಪುಟದಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೂಡ ಇದೇ ಪರಿಸ್ಥಿತಿ ಇತ್ತು. ಎಲ್ಲಾ ಸರ್ಕಾರದಲ್ಲೂ ಕೂಡ ಲಿಂಗಾಯತರು, ಒಕ್ಕಲಿಗರೇ ಇರ್ತಾರೆ. ಅದನ್ನು ಬ್ಯಾಲೆನ್ಸ್ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಪಾಪ ಬಿಎಸ್‍ವೈ ಮೇಲೆ ಸಿದ್ದರಾಮಯ್ಯಗೆ ಅನುಕಂಪ, ಆದ್ರೆ ನಾನು ಸಿಎಂ ಆಗಿದ್ದಾಗ ಹೀಗಿರಲಿಲ್ಲ: ಹೆಚ್‍ಡಿಕೆ
ಸಿದ್ದು ಮತ್ತೆ ಸಿಎಂ ಆಗುವ ಇಂಗಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮೂರೂವರೆ ವರ್ಷದ ನಂತರ ಎಲೆಕ್ಷನ್ ಮುಗಿದ ಮೇಲೆ ತಾನೇ, ಅಲ್ಲಿ ತನಕ ಎಲ್ಲಿ ಸಿಎಂ ಆಗ್ತಾರೆ.? ಅವರು ಅವರು ಅಸೆ ಪಡೋದ್ರಲ್ಲಿ ಏನು ತಪ್ಪು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಸಿಎಂ ಆಗ್ಲಿ. ಈಗಾಗಲೆ ಅಲ್ಲೂ ಬೇರೆಯವರು ಕೂಡ ಕ್ಯೂನಲ್ಲಿದ್ದಾರೆ ಅಂತ ತಿಳಿಸಿದರು.
ದಲಿತರು ಕೂಡ ಈಗ ಲೆಕ್ಕಕ್ಕಿಲ್ಲ. ಸಿದ್ದರಾಮಯ್ಯ ಈಗ ನಾನೇ ಸಿಎಂ ಅಂತಾರೆ. ಅವರೇ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡ್ತಾರೆ ಎಂದು ದಲಿತ ಸಿಎಂ ವಿಚಾರ ಸಂಬಂಧ ಮಾತನಾಡಿದರು.