ಚಾಮರಾಜನಗರ: ಸಾಲ ವಸೂಲಾತಿಗೆ ಅರೆಸ್ಟ್ ವಾರಂಟ್ ಬೆಳಗಾವಿ ರೈತರಿಗಷ್ಟೆ ಜಾರಿಯಾಗಿಲ್ಲ. ಚಾಮರಾಜನಗರ ರೈತರಿಗೂ ಅರೆಸ್ಟ್ ವಾರಂಟ್ ಜಾರಿಯಾಗಿದ್ದು ರೈತರು ಬಂಧನದ ಭೀತಿಯಿಂದ ಕಂಗಾಲಾಗಿದ್ದಾರೆ.
ಹೌದು. ಸಾಲ ವಸೂಲಿಗಾಗಿ ಆಕ್ಸಿಸ್ ಬ್ಯಾಂಕ್ ದೂರದ ಕೊಲ್ಕತ್ತಾ ಕೋರ್ಟ್ ನಲ್ಲಿ ಚಾಮರಾಜನಗರ ರೈತರ ವಿರುದ್ಧ ಕೇಸ್ ದಾಖಲಿಸಿದ್ದು ರೈತನ ಬಂಧನಕ್ಕೆ ವಾರಂಟ್ ಜಾರಿಯಾಗಿದೆ.
ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರು ರೈತ ಉಮಾಪತಿ ಎಂಬವರು ಚಾಮರಾಜನಗರ ಆಕ್ಸಿಸ್ ಬ್ಯಾಂಕ್ ನಲ್ಲಿ ಮೂರು ವರ್ಷಗಳ ಹಿಂದೆ 1 ಲಕ್ಷ 78 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಆದರೆ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ರೈತನ ವಿರುದ್ಧ ಆಕ್ಸಿಸ್ ಬ್ಯಾಂಕ್ ಕೋಲ್ಕತ್ತಾದ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್ ಹಾಕಿದ್ದು ಬಂಧನದ ವಾರಂಟ್ ಜಾರಿಯಾಗಿದೆ.
ಇಷ್ಟೆ ಅಲ್ಲ ಚಾಮರಾಜನಗರ ವಿಜಯ ಬ್ಯಾಂಕ್ ಕೂಡ ರೈತರಿಗೆ ನೋಟಿಸ್ ಮೇಲೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಸಾಲ ವಸೂಲಾತಿಗಾಗಿ ರೈತರಿಗೆ ತೊಂದರೆ ನೀಡದಂತೆ ಮುಖ್ಯಮಂತ್ರಿ ಸೂಚಿಸಿದ್ದರೂ ಕೇರ್ ಮಾಡದ ಬ್ಯಾಂಕ್ ಅಧಿಕಾರಿಗಳು ಮುಖ್ಯಮಂತ್ರಿಯನ್ನೆ ನಿಂದಿಸುತ್ತಾ ನೋಟಿಸ್ ಮೇಲೆ ನೋಟಿಸ್ ನೀಡುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದು ರೈತರು ಅಪಾದಿಸಿದ್ದಾರೆ. ಬ್ಯಾಂಕ್ ಗಳ ಕ್ರಮದಿಂದಾಗಿ ರೈತರು ಕಂಗೆಟ್ಟಿದ್ದು ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv