ಚಾಮರಾಜನಗರ: ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚಾಮರಾಜನಗರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಲಾಗಿದೆ.
Advertisement
ಚಾಮರಾಜನಗರ ತಾಲೂಕು ಕೋಳಿಪಾಳ್ಯ ಗ್ರಾಮದ ತೊಳಚನಾಯಕ, ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಪತ್ನಿಯ ಚಿನ್ನದ ನೆಕ್ಲೆಸ್ ಅನ್ನು ತೊಳಚನಾಯಕ ಗಿರವಿ ಇಟ್ಟಿದ್ದರು. ನೆಕ್ಲೆಸ್ ಬಿಡಿಸಿಕೊಡುವಂತೆ ಒತ್ತಾಯಿಸುತ್ತಿದ್ದ ಪತ್ನಿ ಪುಷ್ಪಬಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದರು. ಇದನ್ನೂ ಓದಿ: ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಕೊಲೆ ಆರೋಪಿ!
Advertisement
Advertisement
ಪತ್ನಿ ಪುಷ್ಪಾಬಾಯಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನೆಕ್ಲೆಸ್ ಬಿಡಿಸಿಕೊಡುವಂತೆ ಕೇಳಿದ್ದಕ್ಕೆ 2017ರ ಫೆಬ್ರುವರಿ 27 ರಂದು ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪ ಸಾಭೀತಾದ ಹಿನ್ನಲೆ ತೊಳಚನಾಯಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬತ್ತಿಯಂತೆ ದೀಪದಲ್ಲಿ ಉರಿಯುವ ಅಪರೂಪದ ಎಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆ