ಚಾಮರಾಜನಗರ: ಹದ್ದುಗಳ ಹಾರಾಟದಿಂದಾಗಿ ಆನೆಯೊಂದು ಮೃತಪಟ್ಟಿರುವುದು ತಿಳಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕಾಡಿನೊಳಗೆ ಗಂಡು ಆನೆಯೊಂದು ಮೃತಪಟ್ಟಿದೆ. 50 ವರ್ಷದ ಆನೆಯ ಕಳೇಬರವು ಕಲಿಗೌಡನಹಳ್ಳಿ ಬೀಟಿನ ತಾರೆಮರದ ಕೊಳಚಿಯಲ್ಲಿ ಪತ್ತೆಯಾಗಿದೆ. ವಯೋಸಹಜವಾಗಿ ಮೃತಪಟ್ಟಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದು, ಆನೆ ಮೃತಪಟ್ಟು 3-4 ದಿನಗಳು ಕಳೆದಿರಬಹುದು ಎಂದು ಮೂಲಗಳು ತಿಳಿಸಿವೆ.
ಹದ್ದುಗಳು ಹಾರಾಡುತ್ತಿದ್ದಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ ವೇಳೆ ಆನೆ ಮೃತಪಟ್ಟಿರುವುದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ನಡೆಯಬೇಕಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.