ಚಮಕ್, ಅವತಾರ ಪುರುಷ (Avatara Purusha) ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಿರ್ದೇಶಕ ಸಿಂಪಲ್ ಸುನಿ (Simple Suni) ಸೀರಿಯಲ್ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಶಾಂಭವಿ (Shambhavi) ಎಂಬ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಶಾಂಭವಿ ಮುದ್ದಾದ 6 ವರ್ಷದ ಮಗು. ಇವಳ ಅಮ್ಮ ಶಿವಗಾಮಿ ಸಾವಿರಾರು ಕೋಟಿ ಆಸ್ತಿಯ ಒಡತಿ. ಶ್ರೀ ಶಾಂಭವಿ ಶಿಕ್ಷಣ ಸಂಸ್ಥೆ ಜೊತೆ ಇನ್ನೂ ಹಲವು ಉದ್ಯಮಗಳಿವೆ. ಇವಳಿಗೊಬ್ಬ ಅಣ್ಣ ಹರಿಪ್ರಸಾದ್. ಅಣ್ಣ ತಂಗಿಗೆ ಅವರಿಬ್ಬರೇ ಪ್ರಪಂಚವಾಗಿರುತ್ತಾರೆ. ಇದನ್ನೂ ಓದಿ:Jawan ರಿಲೀಸ್ ದಿನವೇ ಬರುತ್ತಿದೆ ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾ

ನಾಯಕ ಅಶೋಕ ಅವರ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇರುವುದರೊಂದಿಗೆ ಕಥೆ ತಿರುವು ಪಡೆದುಕೊಳ್ಳುತ್ತದೆ. ಅಶೋಕನ ಮನೆಯವರು ದುಡ್ಡಿಗಾಗಿ ಹಪಹಪಿಸುವ ಮಂದಿಯಾಗಿದ್ದು, ಅವನ ಅಮ್ಮ ಮತ್ತು ತಮ್ಮಂದಿರು ತುಂಬಾ ಖತರ್ನಾಕ್ ಆಗಿರುತ್ತಾರೆ. ಈ ಮೂಲಕ ದೇವರಾಗಿ ದೆವ್ವವಾಗಿ ಕಾಡುವ ಮಗುವಿನ ಕಥೆಯನ್ನ ಸಿಂಪಲ್ ಸುನಿ ತೋರಿಸಲು ಹೊರಟಿದ್ದಾರೆ. ಸದ್ಯದಲ್ಲೇ ಈ ಸೀರಿಯಲ್, ಟಿವಿ ಪರದೆಯಲ್ಲಿ ಮೂಡಿ ಬರಲಿದೆ.
ಶಾಂಭವಿ ಸೀರಿಯಲ್‌ನಲ್ಲಿ ಐಶ್ವರ್ಯಾ ಸಿಂಧೋಗಿ (Aishwarya Shindogi), ವಿನಯ್ ಗೌಡ (Vinay Gowda) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಂಭವಿ ಆಗಿ ಬಾಲನಟಿ ರಚನಾ ಜೀವ ತುಂಬಿದ್ದಾರೆ. ಈ ಸೀರಿಯಲ್ ಜೊತೆಗೆ ಒಂದು ಸರಳ ಪ್ರೇಮ ಕಥೆ, ಅವತಾರ ಪುರುಷ 2, ಗತವೈಭವ ಸಿನಿಮಾಗಳು ಸಿಂಪಲ್ ಸುನಿ ಕೈಯಲ್ಲಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

