ಬೆಂಗಳೂರು: ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಶಾಮೀಲಾದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕೊದ್ದಾರೆ.
Advertisement
ವಿದ್ಯಾರ್ಥಿನಿ ಮಧು ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ರಾಜ್ಯದ ಮೂಲೆ ಮೂಲೆಯಿಂದಲೂ ಕೂಗು ಕೇಳಿಬರುತ್ತಿದೆ. ಅಲ್ಲದೆ #JusticeForMadhu ಎಂದು ಅಭಿಯಾನವನ್ನೇ ಶುರುಮಾಡಲಾಗಿದೆ. ಈ ಅಭಿಯಾನಕ್ಕೆ ಚಿತ್ರರಂಗದ ಗಣ್ಯರು ಕೂಡ ಸಾಥ್ ನೀಡುತ್ತಿದ್ದು, ಮೃತ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ದರ್ಶನ್ ಅವರು ಕೂಡ ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಕೀಚಕರಿಗೆ ಕಠಿಣ ಶಿಕ್ಷೆ ನೀಡಿ ಮಧುಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು ಎಂದು ಬರೆದು #JusticeForMadhu ಎಂಬ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
Advertisement
ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು. pic.twitter.com/JgdmtW7vIK
— Darshan Thoogudeepa (@dasadarshan) April 20, 2019
ಏನಿದು ಪ್ರಕರಣ?
ಏಪ್ರಿಲ್ 16 ರಂದು ಮೃತ ಮಧು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಡೆತ್‍ನೋಟ್ ನೋಡಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ಮಧು ತಾಯಿ ಇದು ಕೊಲೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತ ಮಧು ಗೆಳೆಯ ಸುದರ್ಶನ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.