ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮದಕರಿ ನಾಯಕನ ಪಾತ್ರದಲ್ಲಿ ನಟಿಸುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ದರ್ಶನ್ ಅವರು `ನನ್ನ ಪ್ರಕಾರ’ ಚಿತ್ರದ ಟ್ರೈಲರ್ ಲಾಂಚ್‍ಗೆ ಹೋಗಿದ್ದರು. ಈ ವೇಳೆ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಆಗ ದರ್ಶನ್ ಅವರು ಸಂಗೊಳ್ಳಿ ರಾಯಣ್ಣ, ದುರ್ಯೋಧನ ಪಾತ್ರ ಬಿಟ್ಟರೆ ನನಗೆ ಮದಕರಿ ನಾಯಕನ ಪಾತ್ರ ಮಾಡಬೇಕು ಎಂದು ಹೇಳುವ ಮೂಲಕ ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಬಳಿಕ 1970, 1980ರಲ್ಲಿ ದುರ್ಯೋಧನ ಪಾತ್ರ ನಿಭಾಯಿಸಲು ಯಾರು ಸೂಕ್ತ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ದರ್ಶನ್ ದುರ್ಯೋಧನ ಪಾತ್ರ ಮಾಡಲು ಸಾಕಷ್ಟು ದಿಗ್ಗಜರು ಇದ್ದಾರೆ. ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಿನಿಮಾ ಬೇಕು ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಪ್ರಕಾರ ಚಿತ್ರದಲ್ಲಿ ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಕಿಶೋರ್, ಮಯೂರಿ ಮುಂತಾದವರೂ ಅಭಿನಯಿಸಿದ್ದಾರೆ. ಈಗಾಗಲೇ ಪೋಸ್ಟರ್, ಹಾಡು ಮುಂತಾದವುಗಳಿಂದ ಬಹುನಿರೀಕ್ಷಿತ ಚಿತ್ರವಾಗಿಯೂ ನನ್ನ ಪ್ರಕಾರ ಹೊರ ಹೊಮ್ಮಿದೆ. ಇದೇ 23ರಂದು ಚಿತ್ರ ಬಿಡುಗಡೆಯಾಗಲಿದೆ.